ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ-ಉಚ್ಚಿಲ ದಸರಾ 2026 ರ ಬೃಹತ್ ಶೋಭಾಯಾತ್ರೆ ಮೆರವಣಿಗೆಯ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಸಂಚಾರ ಅಡಚಣೆ ನಿಯಂತ್ರಣ ಮಾಡುವ ಉದ್ದೇಶದಿಂದ ದಿನಾಂಕ: 21-10-2026 ರಂದು ಈ ಕೆಳಗಿನಂತೆ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ.
- ಉಡುಪಿ-ಮಂಗಳೂರು ಮಾರ್ಗವಾಗಿ ಬರುವ ಘನ ವಾಹನಗಳನ್ನು ಅಪರಾಹ್ನ 3:00 ಗಂಟೆಯಿಂದ ರಾತ್ರಿ 11.00 ಗಂಟೆಯವರೆಗೆ ಬದಲಿ ಮಾರ್ಗವಾಗಿ ಕಟಪಾಡಿ-ಶಿರ್ವ-ಬೆಳ್ಳಣ್ಣು-ಪಡುಬಿದ್ರಿ ಮಾರ್ಗವಾಗಿ ಸಂಚರಿಸುವುದು.
- ಉಡುಪಿ ಕಡೆಯಿಂದ ಬಜ್ಪೆ ಏರ್ಪೋರ್ಟ್ಗೆ ಹೋಗುವ ವಾಹನಗಳು ಕಟಪಾಡಿ-ಶಿರ್ವ-ಬೆಳ್ಳಣ್ಣು-ಮುಂದೂರು ಮಾರ್ಗವಾಗಿ ಸಂಚರಿಸುವುದು.
- ಟ್ರಕ್, ಲಾರಿ, ಟ್ಯಾಂಕರ್ ಮುಂತಾದ ಘನ ವಾಹನಗಳನ್ನು ರಾತ್ರಿ 9.00 ಗಂಟೆಯವರೆಗೆ ಕುಂದಾಪುರ, ಉಡುಪಿ ಕಡೆಗಳಲ್ಲಿ ಟ್ರಕ್ ಬೇಯಲ್ಲಿ ನಿಲ್ಲಿಸಿ ನಂತರ ಸಂಚಾರ ಮುಂದುವರೆಸುವುದು.
- ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಸಂಚರಿಸುವ ರಾತ್ರಿ ಪ್ರಯಾಣಿಕ ಬಸ್ಸುಗಳು ರಾತ್ರಿ 9.00 ಗಂಟೆಯ ನಂತರ ಉಡುಪಿಯಿಂದ ಸಂಚರಿಸುವುದು.
- ಮಂಗಳೂರು-ಉಡುಪಿ ಮಾರ್ಗವಾಗಿ ಅಪರಾಹ್ನ 3.00 ಗಂಟೆಯಿಂದ ರಾತ್ರಿ 11.00 ಗಂಟೆಯವರೆಗೆ ಘನ ವಾಹನಗಳ ಸಂಚಾರ ನಿಷೇಧಿಸಿದೆ.
ಸಾರ್ವಜನಿಕರು ಸಹಕರಿಸಿ, ಸುರಕ್ಷಿತವಾಗಿ ಸಂಚರಿಸಿ
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ





