ಕುಂದಾಪುರ : ಪಿರ್ಯಾದಿ ನಾಗ (65), ತಂದೆ: ಹಾವಳಿ, ವಾಸ :ಕಬ್ಬೈಲು ಉಳಿಯಾರ ಮನೆ, ಕನ್ಯಾನ ಗ್ರಾಮ ಕುಂದಾಪುರ ಇವರು ಪರಿಶಿಷ್ಟ ಪಂಗಡ (ಕೊರಗ) ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಸುಮಾರು 30 ವರ್ಷಗಳಿಂದ ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ನಿವಾಸಿಯಾದ ಸುಬ್ಬಣ್ಣ ಶೆಟ್ಟಿ @ ಶಾನಪ್ಪ ಶೆಟ್ಟಿ ರವರು ಕರೆದುಕೊಂಡು ಬಂದು ಕೆಲಸಕ್ಕೆ ಇಟ್ಟುಕೊಂಡಿರುತ್ತಾರೆ. ಸುಬ್ಬಣ್ಣ ಶೆಟ್ಟಿ ರವರು ಮೃತಪಟ್ಟ ನಂತರ ಅವರ ಮಗಳು ರಜನಿ ಶೆಟ್ಟಿ ಮತ್ತು ಅವರ ಅಳಿಯ ಕರುಣಾಕರ ಶೆಟ್ಟಿ ರವರು ಪಿರ್ಯಾದಿದಾರರನ್ನು ಮನೆಯಲ್ಲಿ ದನ ಕಾಯಲು, ತೋಟದ ಕೆಲಸ ಮಾಡಿಸಿಕೊಂಡಿರುತ್ತಾರೆ. ಪಿರ್ಯಾದಿದಾರರಿಂದ ದನ, ಎಮ್ಮೆ, ಸಗಣಿ ತೆಗೆದು ಗದ್ದೆ ಕೆಲಸ, ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸುತ್ತಿದ್ದರು. ಪಿರ್ಯಾದಿದಾರರನ್ನು 30 ವರ್ಷ ಗಳಿಂದ ಬಲವಂತದಿಂದ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದು, ಸರಿಯಾದ ಕೂಲಿ ಕೊಡದೆ ಉಳಿದುಕೊಳ್ಳಲು ಮೂಲಭೂತ ಸೌಕರ್ಯ ಕೊಡದೆ, ದನದ ಕೊಟ್ಟಿಗೆಯಲ್ಲಿ ಮಲಗಿಸಿರುವುದಾಗಿದೆ. ಪಿರ್ಯಾದಿದಾರರಿಗೆ ದನದ ಕೊಟ್ಟಿಗೆಯಲ್ಲಿಯೇ ವಾಸ ಸ್ಥಳವನ್ನಾಗಿ ನೀಡಿದ್ದು, ತಿಂಡಿ ತಟ್ಟೆಗಳು, ಬಟ್ಟೆ, ಎಲ್ಲಾ ದನದ ಕೊಟ್ಟಿಗೆಯಲ್ಲಿಯೇ ಇಡುವಂತೆ ಒತ್ತಾಯ ಮಾಡಿರುತ್ತಾರೆ. ಊಟವನ್ನು ಸಹ ಬಾಳೆ ಎಲೆಯಲ್ಲಿ ದನದ ಕೊಟ್ಟಿಗೆಯಲ್ಲಿ ನೀಡುತ್ತಿದ್ದು, ಪಿರ್ಯಾದಿದಾರರಿಗೆ ಸಂಬಳ ಕೊಡದೆ ಮನೆಯಿಂದ ಹೊರಗಡೆ ಹೋಗಲು ಬಿಡದೆ ದೌರ್ಜನ್ಯ ಎಸಗಿರುವುದಾಗಿದೆ. ಪಿರ್ಯಾದಿದಾರರು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರಿದವರಾಗಿದ್ದು, ಪಿರ್ಯಾದಿದಾರರಿಗೆ ಸರಿಯಾದ ಕೂಲಿ ಕೊಡದೆ ದುಡಿಸಿಕೊಂಡಿದ್ದು, ದಲಿತ ದೌರ್ಜನ್ಯ ಎಸಗಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 13/2026 ಕಲಂ: 3(1)(H)SC/ST Act-2015ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ತನಿಖೆ ಕೈಗೊಂಡ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಹೆಚ್ಡಿ ಕುಲಕರ್ಣಿ ಇವರು ಆರೋಪಿತರಾಧ ರಜನಿ ಶೆಟ್ಟಿ ಗಂಡ : ಕರುಣಾಕರ ಶೆಟ್ಟಿ, ವಾಸ :ಕಬ್ಬೈಲು ಉಳಿಯಾರ ಮನೆ, ಕನ್ಯಾನ ಗ್ರಾಮ ಕುಂದಾಪುರ ತಾಲೂಕು ಇವರನ್ನು ದಸ್ತಿಗಿರಿ ಮಾಡಿ, ಮಾನ್ಯ ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತೆಗೆ ನ್ಯಾಯಾಂಗ ಬಂಧನವನ್ನು ನೀಡಿದ್ದು, ಪ್ರಸ್ತುತ ಆರೋಪಿತೆಯನ್ನು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಸದರಿ ಘಟನಾ ಸ್ಥಳಕ್ಕೆ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಉಡುಪಿ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ, ಕಾರ್ಮಿಕ ಅಧಿಕಾರಿ, ಉಡುಪಿ ಜಿಲ್ಲೆ, ಕಾರ್ಮಿಕ ನಿರೀಕ್ಷಕರು, ಕುಂದಾಪುರ, ಉಪ ತಹಶೀಲ್ದಾರರು, ಕುಂದಾಪುರ, ಗ್ರಾಮ ಆಡಳಿತ ಅಧಿಕಾರಿ, ಪಂಚಾಯತ್ ಅಭಿವೃಧ್ದಿ ಅಧಿಕಾರಿ, ಕಾರ್ಯದರ್ಶಿ, ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮತ್ತು ಇತರೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ. ನೊಂದ ವ್ಯಕ್ತಿ ನಾಗ ಇವರನ್ನು ವಿಚಾರಿಸಿ ಇವರಿಗೆ ಮುಂದಿನ ಪುರ್ನವಸತಿ ಕಲ್ಪಿಸುವ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







