ಉಡುಪಿ ತಾಲೂಕು ಮಣಿಪುರ ಗ್ರಾಮದ ಅರಬಿ ಕೆನರಾಡಿ ನಿವಾಸಿಗಳಾದ ವಲೇರಿಯನ್ ಮೆಂಡೋನ್ಸ ಮತ್ತು ಪ್ರವೀಣ್ ಮೆಂಡೋನ್ಸ ರವರು ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳಾಗಿದ್ದು, ವನಜಾ ಪೂಜಾರ್ತಿ (60) ಎಂಬ ಮಹಿಳೆಯೊಂದಿಗೆ ಆಗಾಗ್ಗೆ ವಲೇರಿಯನ್ ಮೆಂಡೋನ್ಸ ರವರ ಮನೆಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು.
ದಿನಾಂಕ 09/03/2026 ರಂದು ಸಂಜೆ 5:00 ರಿಂದ ದಿನಾಂಕ 10/03/2026 ರಂದು ಬೆಳಿಗ್ಗೆ 7:00 ಗಂಟೆಯ ಮಧ್ಯಾವಧಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಲೇರಿಯನ್ ಮೆಂಡೋನ್ಸ ಮತ್ತು ಪ್ರವೀಣ್ ಮೆಂಡೋನ್ಸ ರವರು ವನಜಾ ಪೂಜಾರ್ತಿಯವರನ್ನು ಯಾವುದೋ ಹರಿತವಾದ ಆಯುಧದಿಂದ ಕೊಲೆ ಮಾಡಿರುತ್ತಾರೆ ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 33/26 ಕಲಂ. 103 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಸದ್ರಿ ಸ್ಥಳಕ್ಕೆ ಕೆ.ಎಂ.ಸಿ ಮಣಿಪಾಲ್ ಫೋರೆನ್ಸಿಕ್ ವೈದ್ಯರು, ಸೋಕೋ ತಂಡ, ಶ್ವಾನ ದಳ ಮತ್ತು ಫಿಂಗರ್ ಪ್ರಿಂಟ್ ವಿಭಾಗದ ತಜ್ಞರಿಂದ ಪರಿಶೀಲನೆಗೆ ಒಳಪಡಿಸಲಾಗಿದೆ.


ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋ







