ದಿನಾಂಕ 26/01/2026 ರಂದು ಬೆಳಿಗ್ಗೆ 10:45 ಗಂಟೆಗೆ ಪಿರ್ಯಾದು ಜಿ ಗುರುಪ್ರಸಾದ್(34), ಮೈಸೂರು ಇವರನ್ನು ಸೇರಿ ಒಟ್ಟು 29 ಜನರನ್ನು ಆರೋಪಿ ಸುಹಾಸ್ ರವರು 1 ಬೋಟ್ ನಲ್ಲಿ 14 ಹಾಗೂ ಇನ್ನೊಂದು ಬೋಟ್ ನಲ್ಲಿ 15 ಜನರಂತೆ 2 ಪ್ರತ್ಯೇಕ ಬೋಟ್ ನಲ್ಲಿ ದೋಣಿ ವಿಹಾರಕ್ಕೆ ಕಳುಹಿಸಿದ್ದು, ಬ್ರಹ್ಮಾವರ ತಾಲೂಕು ಕೋಡಿ ಕನ್ಯಾನ ಗ್ರಾಮದ ಕೋಡಿಬೇಂಗ್ರೆ ಅಳಿವೆಬಾಗಿಲು ಎಂಬಲ್ಲಿ ಸ್ವರ್ಣ ನದಿಯಲ್ಲಿ ಬೆಳಿಗ್ಗೆ 11:15 ಗಂಟೆಗೆ ಪಿರ್ಯಾದುದಾರರು ವಿಹಾರ ಮಾಡುತ್ತಿದ್ದ THE WAVE RIDER ಎಂಬ ಹೆಸರಿನ ಬೋಟ್ ನ್ನು ಅದರ ಚಾಲಕ ಸೂಫಿಯಾನ ಮತ್ತು ವಾಸು ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಓಮ್ಮೆಲೆ ಎಡ ಬದಿಗೆ ತಿರುಗಿಸಿ ಚಲಾಯಿಸಿದ್ದರಿಂದ ಬೋಟ್ ಮಗುಚಿ ಬಿದ್ದು, ಬೋಟ್ ನಲ್ಲಿದ್ದ ಎಲ್ಲಾ 14 ಜನ ನೀರಿಗೆ ಬಿದ್ದು, ಅವರಲ್ಲಿ ಶಂಕರಪ್ಪ(27), ಕುಮಾರಿ ಸಿಂಧು.ಪಿ(23) ಮತ್ತು ಕುಮಾರಿ ದಿಶಾ(26) ಇವರು ನೀರಿನಲ್ಲಿ ಮುಳುಗಿ ಮೃತರಾಗಿರುತ್ತಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿರುತ್ತಾರೆ. ಆರೋಪಿಗಳಾದ 1) ಸುಹಾಸ್, 2)ಸೂಫಿಯಾನ್ ಮತ್ತು 3)ವಾಸುರವರ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸಾವಿಗೆ ಕಾರಣರಾಗಿದ್ದು, ಈ ಬಗ್ಗೆ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 08/2026 ಕಲಂ: 284,125(a),106 ಬಿಎನ್ಎಸ್ 2023ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ನಂತರದ ಪ್ರಕರಣದ ತನಿಖೆಯಲ್ಲಿ ಸದರಿ ಬೋಟ್ ವಿಹಾರಕ್ಕೆ ಆರೋಪಿಗಳು ಪ್ರಸಾಸೋಧ್ಯಮ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಇರುವುದು ಕಂಡುಬಂದಿರುತ್ತದೆ. ಅಲ್ಲದೇ ಈ ಘಟನೆಗೆ ಕಾರಣವಾದ ಬೋಟ್ ಪ್ರವಾಸೋಧ್ಯಮದಲ್ಲಿ ಪ್ರವಾಸಿಗರ ವಿಹಾರಕ್ಕೆ ಸೂಕ್ತ ವಾಗಿದೆ ಎನ್ನುವ ಬಗ್ಗೆ ಯಾವುದೇ ಧೃಢೀಕೃರಣ ಪತ್ರವನ್ನು ಹೊಂದದೇ ಇರುವುದು ಕಂಡುಬಂದಿರುತ್ತದೆ. ಈ ಘಟನೆಗೆ ಬಳಸಿದ ಬೋಟ್ ಪ್ರವಾಸೋಧ್ಯಮದಲ್ಲಿ ಪ್ರವಾಸಿಗರ ವಿಹಾರಕ್ಕೆ ಸೂಕ್ತವಾಗಿರುವ ಬೋಟ್ ಕೂಡ ಅಲ್ಲವೆಂದು ತನಿಖೆಯಿಂದ ತಿಳಿದುಬಂದಿರುತ್ತದೆ. ಸದರಿ ಬೋಟ್ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವಾಗ ಲೈಫ್ ಜಾಕೆಟ್ನಂತಹ ಯಾವುದೇ ಮಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ಇರುವುದು ಕೂಡ ತನಿಖೆಯಲ್ಲಿ ಕಂಡುಬಂದಿರುತ್ತದೆ.
ಈ ಪ್ರಕರಣದ ಠಾಣಾ ಸರಹದ್ದು ಕೋಟ ಠಾಣೆ ವ್ಯಾಪ್ತಿಗೆ ಬರುವುದರಿಂದ ಸದರಿ ಪ್ರಕರಣವನ್ನು ಕೋಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಸದರಿ ಪ್ರಕರಣವು ಆರೋಪಿಗಳ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ನಡೆದಿರುವುದರಿಂದ ಆರೋಪಿತರ ವಿರುದ್ಧ ನಿರ್ಲಕ್ಷತನದ ಸೆಕ್ಷನ್ಗಳನ್ನು ಆಳವಡಿಸಿ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 14/2026 ಕಲಂ: 284, 125(a), 106, 105, 110 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ,
ಸದರಿ ಪ್ರಕರಣದ ಆರೋಪಿಗಳಾದ 1) ಸುಹಾಸ್ ಶ್ರೀಯಾನ್(23), ತಂದೆ: ಶಶಿಧರ್ ಶ್ರೀಯಾನ್ ಕೋಡಿಬೇಂಗ್ರೆ, ಕೋಡಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ, 2) ಸುಫಿಯಾನ್(20), ತಂದೆ:ದಿ.ಸುಭಾನ್ ಕೋಡಿಬೇಂಗ್ರೆ, ಕೋಡಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಮತ್ತು 3) ವಾಸು ಮೆಂಡನ್(52̧) ತಂದೆ: ದಿ. ಗುರುವ ಕುಂದ̧ರ್ ಕೋಡಿಬೇಂಗ್ರೆ, ಕೋಡಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






