ಬೆಂಗಳೂರು: ಮಾದಕ ಪದಾರ್ಥಗಳ ಮಾರಾಟ ದಂಧೆಯಲ್ಲಿ ತೊಡಗಿದ್ದ ನೈಜೀರಿಯಾ ಪ್ರಜೆಯನ್ನ ಸಿಸಿಬಿಯ ಪೊಲೀಸರು ಬಂಧಿಸಿದ್ದಾರೆ. ಅರ್ನೆಸ್ಟ್ ಯುಗಾಹ್ಸ್ (45) ಬಂಧಿತ ಆರೋಪಿ. ಆತನಿಂದ 2.5 ಕೆ.ಜಿ ಎಂಡಿಎಂಎ, 300 ಎಕ್ಸ್‌ಟಸಿ ಮಾತ್ರೆಗಳ ಸಹಿತ ಒಟ್ಟು 5.15 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಹಿಂದೆ ಕಾಡುಗೋಡಿ, ಹೆಣ್ಣೂರು ಠಾಣೆಗಳಲ್ಲಿ ಅರ್ನೆಸ್ಟ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚಿಗೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಪುನಃ ಮಾದಕ ದಂಧೆ ಮುಂದುವರೆಸಿದ್ದ. ಮಾರತ್‌ಹಳ್ಳಿ ವ್ಯಾಪ್ತಿಯ ಮುನೇಕೊಳಲು ಬಳಿ ಬಾಡಿಗೆ ಮನೆ ಪಡೆದಿದ್ದ ಆರೋಪಿ, ಅಲ್ಲಿಂದಲೇ ತನ್ನ ದಂಧೆಯನ್ನ ಮುಂದುವರೆಸಿದ್ದ. ಆರೋಪಿಯ ಜೊತೆ ಸಂಪರ್ಕದಲ್ಲಿದ್ದವರು, ಗಿರಾಕಿಗಳನ್ನ ಪತ್ತೆಹಚ್ಚುವ ಕೆಲಸ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







