ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಖಾಲಿ ಮನೆಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಮನೋತೋಷ್ ಕಾಯಲ್(39), ತಂದೆ: ಧನಂಜಯ ಕಾಯಲ್ ಆನಂದ ಪುರ, ಪೂರ್ಬಪದ, ಲಕ್ಷ್ ಬಾಗಲ್ ಗೋ ಸಭಾ, ಪರ್ಗ ನಾಸ್, ಪಶ್ಚಿಮ ಬಂಗಾಳ ಹಾಲಿ ವಾಸ: ಮಳಲಿ ಕ್ರಾಸ್ ಪೊಗರು ಗ್ರಾಮ ಗಂಜಿಮಠ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಈತನನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಸದರಿ ಆರೋಪಿತನು ಬೆಳಿಗ್ಗೆ ಬೇರೆ ಬೇರೆ ಪ್ರದೇಶಗಳಲ್ಲಿ ಸಂಚರಿಸಿ ತುಂಬಾ ದಿನಗಳಿದ್ದ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಬೀಗ ಒಡೆದು ಕಳತನ ಮಾಡುತ್ತಿದ್ದ. ಈ ಕುರಿತಂತೆ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ ; 163/25 ಕಲಂ 331(3), 305 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಮನೆಯಲ್ಲಿನ ಬ್ಯಾಟರಿಯನ್ನು ಕದ್ದುಕೊಂಡು ಹೋಗಿರುತ್ತಾನೆ.
ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ.ಟಿ. ರವರ, ಸಿ.ಪಿ.ಐ ಕಾರ್ಕಳ ರವರಾದ ಮಂಜಪ್ಪ ರವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಎಂ.ಎಸ್. ಪಿಎಸ್‌ಐ ಸುಂದರ, ಎಎಸ್‌ಐ ಪ್ರಕಾಶ, ಎಎಸ್‌ಐ ಸುಂದರ ಗೌಡ, ಹೆಚ್.ಸಿ. ರುದ್ರೇಶ್, ಹೆಚ್.ಸಿ. ಚಂದ್ರಶೇಖರ್, ಪಿಸಿ ಸಂತೋಷ್, ಮಾಂತೇಶ್ ಮತ್ತು ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿಯಾದ ದಿನೇಶ್ ರವರು ಆರೋಪಿತನನ್ನು ಬಂದಿಸಿದ್ದು, ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂದನ ವಿಧಿಸಿರುತ್ತದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







