ದಿನಾಂಕ 30-8-2025 ರಂದು 19.30 ಗಂಟೆಗೆ 22.30 ಗಂಟೆಯ ನಡುವಿನ ಆವಧಿಯಲ್ಲಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಕಾಯಿನ್ ಸರ್ಕಲ್ ಬಳಿಯ ಹಾಟ್ & ಸ್ಪೈಸ್ ಹೋಟೆಲ್ ಬಳಿ ನಿಲ್ಲಿಸಿದ್ದ ಪಿರ್ಯಾದಿ ಪ್ರದೀಪ್ ಸಾಲ್ಯಾನ್, ಹೆರ್ಗಾ ಗ್ರಾಮ ಇವರ KA 20 EP 9062ನೇ ನಂಬ್ರದ HONDA Active ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರವುದಾಗಿದ್ದು ಅದರ ಅಂದಾಜು ಮೌಲ್ಯ ಸುಮಾರು 30,000/- ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾದ ಕ್ರಮಾಂಕ 155/2025 ಕಲಂ 303(2) BNSರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿ ಮತ್ತು ಸ್ವತ್ತು ಪತ್ತೆಯ ಬಗ್ಗೆ ಪ್ರಭು ಡಿ.ಟಿ, ಡಿ.ವೈ.ಎಸ್.ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಮಹೇಶ ಪ್ರಸಾದ ರವರ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಬಿ ಎಂ, ಅಕ್ಷಯ ಕುಮಾರಿ ಎಸ್ ಎನ್ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಗಳಾದ ವಿಶ್ವಜಿತ್, ಚೇತನ್ ,ಅಜ್ಮಲ್ ರವಿರಾಜ್ , ಮಂಜುನಾಥರವರನ್ನು ಒಳಗೊಂಡ ಅಪರಾದ ಪತ್ತೆ ತಂಡವು ದಿನಾಂಕ 7-1-2026 ರಂದು ಪ್ರಕರಣದ ಆರೋಪಿಗಳಾದ 1. ಕಿರಣ ಬಿ ಎನ್( 32), ತಂದೆ. ನಾಗಯ್ಯ ನಾಯ್ಕ ವಾಸ- ತುಳಜಾ ಭವಾನಿ ದೇವಸ್ಥಾನದ ಹತ್ತೀರ ಬಿಸಲಮನೆ ದೊಡ್ಡೇರಿ ಭದ್ರಾವತಿ ಶಿವಮೊಗ್ಗ ಜಿಲ್ಲೆ 2)ಯೋಗೇಶ ನಾಯ್ಕ ಎನ್ , ( 22), ತಂದೆ. ನಾನ್ಯ ನಾಯ್ಕ, ವಾಸ- ಶಿವಪುರ ತಾಂಡಾ ದುರನಮಲ್ಲಿ ಅಂಚೆ ನಿದಿಗಿ ಶಿವಮೊಗ್ಗ ಜಿಲ್ಲೆ ರವರನ್ನು ದಿನಾಂಕ 7-01-2026 ರಂದು ವಶಕ್ಕೆ ಪಡೆದುಕೊಂಡು ಆರೋಪಿಗಳ ಬಳಿ ಇದ್ದ KA 20 EP9062 ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದಾಗಿರುತ್ತದೆ.

ಆರೋಪಿ 1ನೇಯವರ ವಿರುದ್ದ ಈ ಹಿಂದೆಯು ಸಹ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







