ಉಡುಪಿ ಜಿಲ್ಲೆಯಲ್ಲಿ ದಿನಾಂಕ 14/01/2026 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7:00ವರೆಗೆ ಕಲ್ಲು ಮಣ್ಣು ಜಲ್ಲಿ ಮರಳು ಗಳನ್ನು ಸಾಗಿಸುವ ವಾಹನಗಳ Awareness and Enforcement ಎನ್ನುವ ವಿಶೇಷ ಡ್ರೈವ್ ಮೂಲಕ ಕಾರ್ಯಾಚರಣೆ ನಡೆಸಲಾಗಿರುತ್ತದೆ. ಈ ಸಮಯದಲ್ಲಿ 832 ವಾಹನಗಳನ್ನು ಪರಿಶೀಲಿಸಲಾಗಿದ್ದು, 182 ವಾಹನಗಳಿಗೆ ನೋಟಿಸ್ ಗಳನ್ನು ನೀಡಲಾಗಿದೆ. ಓವರ್ಲೋಡ್ ಹಾಗೂ ಇತರೆ ಅಪರಾಧಗಳಿಗಾಗಿ 66 ವಾಹನಗಳ ಮೇಲೆ Spot Fine ಹಾಕಿ ರೂಪಾಯಿ 22,500/- ದಂಡ ವಸೂಲಿ ಮಾಡಲಾಗಿರುತ್ತದೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಒಂದು ವಾಹನದ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು, 27 ವಾಹನಗಳನ್ನು Mines & Geological ಹಸ್ತಾಂತರಿಸಲಾಗಿದೆ.
ಕಳೆದ ಒಂದು ವಾರದಿಂದ(08/01/26 ರಿಂದ 14/01/26) ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವ ಕುರಿತು ಮಾಹಿತಿ ನೀಡುವ ಸಲುವಾಗಿ pampletಗಳನ್ನು ಹಂಚುವುದರ ಮೂಲಕ ಮಾಹಿತಿಯನ್ನು ನೀಡಲಾಗುತ್ತಿದೆ. ಈ ಸಮಯದಲ್ಲಿ ಒಟ್ಟು 1240 pamplet ಗಳನ್ನು ಹಂಚಲಾಗಿದ್ದು, ಈಗಾಗಲೇ 163 ವಾಹನಗಳಿಗೆ ಸ್ಪೀಡ್ ಗವರ್ನರ್ ಅನ್ನು ಅಳವಡಿಸಲಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







