ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2026 ಇದರ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಸಡಕ್ ಸುರಕ್ಷಾ ಜೀವನ್ ರಕ್ಷಾ ಎಂಬ ಘೋಷಣೆ ಅಡಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಉಡುಪಿ ಜಿಲ್ಲೆ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರೆ -66 ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರೆಯಲ್ಲಿ ವಾಹನ ಚಾಲಕರುಗಳಿಗೆ ಚಹಾ ತಿಂಡಿ ಮತ್ತು ಹೂ ಗುಚ್ಚಗಳನ್ನು ನೀಡುವುದರ ಮೂಲಕ ಅವರಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದರ ಬಗ್ಗೆ ಮತ್ತು ವಾಹನ ಚಲಾಯಿಸುವ ಬಗ್ಗೆ ಮತ್ತು ಅಪಘಾತ ನಿಯಂತ್ರಿಸುವ ಬಗ್ಗೆ ಅರಿವು ಮೂಡಿಸುವ ರಾಷ್ಟ್ರೀಯ ಹೆದ್ದಾರೆ -66 ಸಂತೆಕಟ್ಟೆ ಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹರಿರಾಮ್ ಶಂಕರ್ ಐಪಿಎಸ್, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ಇವರು ವಹಿಸಿದ್ದರು. ಉಡುಪಿ ಜಿಲ್ಲಾ ನ್ಯಾಯಾಧೀಶರು ಮತ್ತು DLSನ ಅಧ್ಯಕ್ಷರು ಆದ ಶ್ರೀ ಮನುಪಾಟೀಲ್ ನ್ಯಾಯಾಧೀಶರು, ಉಡುಪಿ ಜಿಲ್ಲೆರವರು ಕಾರ್ಯಕ್ರಮವನ್ನು ಉದ್ಘಾಟಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಭು ಡಿ ಟಿ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಜಿಲ್ಲೆ ರವರು, ತಿಮ್ಮಪ್ಪ ಗೌಡ, ಪೊಲೀಸ್ ಉಪಾಧೀಕ್ಷಕರು, ಡಿಎಆರ್, ಉಡುಪಿ, ರವಿಕುಮಾರ್, ಪೊಲೀಸ್ ನೀರಿಕ್ಷಕರು, ಡಿಎಆರ್, ಉಡುಪಿ ಹಾಗೂ ರಾಮಚಂದ್ರ ನಾಯಕ್, ಪೊಲೀಸ್ ವೃತ್ತ ನೀರಿಕ್ಷಕರು ಮಲ್ಪೆ ವೃತ್ತ ರವರು ಮತ್ತು ಉಡುಪಿ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಉಪನೀರಿಕ್ಷಕರುಗಳು, ಸಾರ್ವಜನಿಕರು ವಾಹನ ಚಾಲಕರು ಲಾರಿಗಳ ಚಾಲಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ರವರು ಸಾರ್ವಜನಿಕರಿಗೆ ರಸ್ತೆ ನಿಯಮಗಳ ಕುರಿತು ಅರಿವು ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಏಳು ದಿನಗಳ ಕಾಲ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ದಿನದ 24 ಗಂಟೆಗಳ ಕಾಲ ಅರಿವೂ ಮೂಡಿಸಲಾಗುವುದು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







