ಉಡುಪಿ: ಲೋಕೋಪಯೋಗಿ ಇಲಾಖೆಯ ಆತ್ರಾಡಿ, ಶಿರ್ವ, ಬಜ್ಪೆ ರಾಜ್ಯ ಹೆದ್ದಾರಿಯ ಶಿರ್ವ ಸೊಸೈಟಿ ಬಳಿಯ ನ್ಯಾರ್ಮ ರಸ್ತೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದೆ ಮಳೆಯ ನೀರು, ನ್ಯಾರ್ಮ ಇಳಿಜಾರು ರಸ್ತೆಯ ಮುಖಾಂತರ ಹಾದು ಹೋಗಿ ನೀರಿನ ಜಲಪಾತದಂತೆ ತೋರುತ್ತಿದ್ದು ರಸ್ತೆಯಲ್ಲಿ ದೊಡ್ಡಮಟ್ಟದ ಹೊಂಡಗಳು ಬಿದ್ದು ವಾಹನ ಸವಾರರಿಗೆ, ಪಾದಾಚಾರಿಗಳಿಗೆ ನಡೆದುಕೊಂಡು ಹೋಗಲು ಅನಾನುಕೂಲವಾಗುತ್ತಿತ್ತು. ಈ ಹೊಂಡದಲ್ಲಿ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲುಮುರಿದು ಆಸ್ಪತ್ರೆಗೆ ಸೇರಿರುತ್ತಾರೆ. ಇದನ್ನು ಮನಗಂಡು ಸಪ್ಟೆಂಬರ್ 11ರಂದು ಶಿರ್ವ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆದು ಪಿ ಡಬ್ಲ್ಯೂ ಡಿ ಸಹಾಯಕ ಇಂಜಿನಿಯರ್ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಶೀಘ್ರವೇ ರಸ್ತೆ ಸರಿಪಡಿಸುವಂತೆ ಬರವಸೆ ನೀಡಿ ಅಕ್ಟೋಬರ್ ತಿಂಗಳಲ್ಲಿ ಹೊಂಡವನ್ನು ಮುಚ್ಚಲಾಯಿತು. ತದನಂತರ ಯಾವುದೇ ಕಾಮಗಾರಿ ನಡೆಯದಿಲ್ಲದಿರುವುದರಿಂದ ರಸ್ತೆಯಲ್ಲಿ ಧೂಳು ಹಬ್ಬಲು ಪ್ರಾರಂಭವಾದರಿಂದ ದ್ವಿಚಕ್ರವಾಹನ ಸವಾರರು, ರಸ್ತೆಯ ಆಸುಪಾಸಿನ ಜನರು ನರಕಯಾತನೆ ಅನುಭವಿಸಿ ಕೆಮ್ಮು, ಕಣ್ಣಿನ ಹಾಗೂ ಸ್ವಾಶಕೋಶದ ಸಮಸ್ಯೆಯಿಂದ ಬಳಲುವಂತಾಗುವುದನ್ನು ಕಂಡು ಸಾರ್ವಜನಿಕರು ಇಲಾಖೆಗೆ ಸ್ಪಂದಿಸಿ ಸ್ಥಳೀಯರಾದ ಗಿರಿಧರ್ ಪ್ರಭುರವರು ಅತೀವ ಕಾಳಜಿ ವಹಿಸಿ ನಿರಂತರ ಇಲಾಖೆಯ ಸಂಪರ್ಕದಲ್ಲಿದ್ದು ಡಿಸೆಂಬರ್ 20ರಂದು ಮರು ಡಾಂಬರೀಕರಣ ಕಾಮಗಾರಿಯನ್ನು ಪ್ರಾರಂಭಿಸಿ ಇರುವುದನ್ನು ಕಂಡು ಸಾನುವಜನಿಕರಲ್ಲಿ ಸಂತಸ ಮೂಡುವಂತಾಗಿದೆ.
ಮುಂದಿನ ಮಳೆಗಾಲದ ಸಮಯದಲ್ಲಿ ರಸ್ತೆಯ ಮೇಲೆ ಹರಿದು ಬರುವ ಮಳೆ ನೀರಿಗಾಗಿ ಚರಂಡಿ ವ್ಯವಸ್ಥೆ ಮಾಡದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ಇದೇ ರೀತಿಯ ನರಕ ಯಾತನೆಯನ್ನು ಅನುಭವಿಸಬೇಕೆಂದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ಮರು ಡಾಂಬರೀಕರಣ 152 ಮೀಟರ್ ಉದ್ದ 9 ಮೀಟರ್ ಅಗಲ ರಸ್ತೆ ಈ ಕಾಮಗಾರಿಗೆ ಯಾವುದೇ ಅನುದಾನ ಪಡೆಯದೆ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ವಹಣೆ ಫಂಡಿನಿಂದ ಜನರ ಅವಹಹಾಲುಗಳಿಗೆ ಸ್ವೀಕರಿಸಿ 33 ಲಕ್ಷ ಬಿಡುಗಡೆ ಮಾಡಿ ಡಾಂಬರೀಕರಣವನ್ನು ಮಾಡಿರುತ್ತೇವೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







