ಶಿರಿಯಾರ ಸೇವಾ ಸಹಕಾರಿ ಸಂಘ, ಕಾವಡಿ ಶಾಖೆಯಲ್ಲಿ ಗುಮಾಸ್ತ/ಜೂನಿಯರ್ ಮ್ಯಾನೇಜರ್ ಆದ 1ನೇ ಆರೋಪಿ ಹರೀಶ್ ಕುಲಾಲ್ ಹಾಗೂ 2ನೇ ಆರೋಪಿ ಮ್ಯಾನೇಜರ್ ಸುರೇಶ್ ಭಟ್ ಇವರುಗಳು ಸಂಘಕ್ಕೆ 1 ಕೋಟಿ 70 ಲಕ್ಷ ಹಣ ವಂಚಿಸಿದ ಬಗ್ಗೆ ದಾಖಲಾದ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 205/2025 ಕಲಂ: 318(3)(4) 112 ಜೊತೆಗೆ 3(5) ಬಿ.ಎನ್.ಎಸ್. 2023ರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಹರೀಶ್ ಕುಲಾಲ್ (32), ತಂದೆ ಬಾಬು ಕುಲಾಲ್ ವಾಸ: ಹವರಾಲು ಕಾವಡಿ ಗ್ರಾಮ ಮತ್ತು ಅಂಚೆ ಬ್ರಹ್ಮಾವರ ತಾಲೂಕು ಉಡುಪಿ ಎಂಬಾತನನ್ನು ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ರವರ ಇವರ ಮಾರ್ಗದರ್ಶನದಲ್ಲಿ ಕೋಟಾ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ಪ್ರವೀಣ ಕುಮಾರ್ ಆರ್. ಪಿ.ಎಸ್.ಐ. ( ಕಾ.&ಸು.) ಮಾಂತೇಶ್ ಜಾಭಗೌಡ, ಪಿ.ಎಸ್.ಐ. ( ತನಿಖೆ ) ಹಾಗೂ ಠಾಣಾ ಸಿಬ್ಬಂದಿಗಳಾದ ಸಿಹೆಚ್‌ಸಿ ಕೃಷ್ಣಶೇರೆಗಾರ, ಸಿಹೆಚ್‌ಸಿ ಶ್ರೀಧರ್, ಪಿಸಿ ಶರತ್ ಇವರುಗಳು ತಂಡ ದಸ್ತಗಿರಿ ಗೊಳಿಸಿರುತ್ತಾರೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






