ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2025ರ ಸಮಾರೋಪ ಸಮಾರಂಭ ಇಂದು ಸಂಜೆ ಉಡುಪಿ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭವ್ಯವಾಗಿ ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಅಮಿತ್ ಸಿಂಗ್, ಐಪಿಎಸ್, ಪೊಲೀಸ್ ಮಹಾನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರು ಹಾಗೂ ಶ್ರೀ ಪ್ರತೀಕ್ ಬಾಯಲ್, ಐಎಎಸ್, ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿಲ್ಲಾ ಪಂಚಾಯತ್ ಭಾಗವಹಿಸಿ ಸಮಾರೋಪ ಕಾರ್ಯಕ್ರಮಕ್ಕೆ ಶೋಭೆ ತಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ್ ನಾಯಕ್ ಮತ್ತು ಕಾರ್ಕಳ ಉಪವಿಭಾಗದ ಹರ್ಷ ಪ್ರಿಯಂವದಾ, ಐಪಿಎಸ್ ಉಪಸ್ಥಿತರಿದ್ದರು.
ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಐದು ತಂಡಗಳಾಗಿ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದರು. ತೀವ್ರ ಸ್ಪರ್ಧಾತ್ಮಕ ವಾತಾವರಣದ ನಡುವೆ ಉಡುಪಿ ಡಿಎಆರ್ ತಂಡ ಸಮಗ್ರ ತಂಡ ಪ್ರಶಸ್ತಿಯನ್ನು ಕೈಸೇರಿಸಿತು.
ವೈಯಕ್ತಿಕ ವಿಭಾಗದಲ್ಲಿ
- ಪುರುಷರ ವಿಭಾಗ: ಡಿಎಆರ್‌ನ ಜೀವನ್
- ಮಹಿಳೆಯರ ವಿಭಾಗ: ಉಡುಪಿ ಉಪವಿಭಾಗದ ನಾಗಶ್ರೀ
ಇವರು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಕ್ರೀಡಾಕೂಟವು ಪೊಲೀಸ್ ಸಿಬ್ಬಂದಿಗಳಲ್ಲಿ ಆರೋಗ್ಯ, ಸ್ನೇಹಸ್ಪರ್ಧೆ ಮತ್ತು ತಂಡಭಾವವನ್ನು ಮತ್ತಷ್ಟು ಬಲಪಡಿಸುವಲ್ಲಿ ಯಶಸ್ವಿಯಾಯಿತು ಎಂದು ಆಯೋಜಕರು ತಿಳಿಸಿದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ




