ದಿನಾಂಕ: 10/11/2025 ರಂದು ಕರುಣಾಕರ ಶೆಟ್ಟಿ 50 ವರ್ಷ ತಂದೆ ಸಂಜೀವ ಶೆಟ್ಟಿ ವಾಸ: ಕುಕ್ಕುಂಜಾರು ಅನಂತಪದ್ಮನಾಭ ನಿಲಯ ಪೆರ್ಡೂರು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಉಡುಪಿ ರವರು ಠಾಣೆಗೆ ಬಂದು ಒಂದು ಲಿಖಿತ ದೂರು ಅರ್ಜಿಯನ್ನು ನೀಡಿದ್ದು ಸಾರಾಂಶವೇನೆಂದರೆ ಮಗನಾದ ಶ್ರೀಶಾನ್ ಕೆ ಶೆಟ್ಟಿ(16) ಈತನು ಹಿರಿಯಡಕ ಸರಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆತನು ದಿನಾಂಕ 09/11/2025ರಂದು 12.15 ಗಂಟೆಗೆ ಪಿರ್ಯಾದಿದಾರರೊಂದಿಗೆ ದ್ವಿಚಕ್ರ ವಾಹನ ನಂ ಕೆ ಎ 20 ಹೆಚ್ ಡಿ 4227 ರಲ್ಲಿ ಪೆರ್ಡೂರಿಗೆ ಹೋಗಿದ್ದು ಅಲ್ಲಿ ಪಿರ್ಯಾದಿದಾರರನ್ನು ಬಿಟ್ಟು ಅಜ್ಜಿ ಮನೆಯಾದ ಅಲಂಗಾರಿಗೆ ಹೋಗಿ ಅಜ್ಜಿ ಮೊಬೈಲ್ ನಿಂದ ಪಿರ್ಯಾದಿದಾರರಿಗೆ ಕರೆ ಮಾಡಿ ತಾನು ಅಜ್ಜಿಯ ಮನೆಯ ಬಳಿ ಇರುವ ನದಿಗೆ ಆಟವಾಡಲು ಹೋಗುವುದಾಗಿ ತಿಳಿಸಿರುತ್ತಾನೆ ಮದ್ಯಾಹ್ನ 03.00 ಗಂಟೆಯಾದರೂ ಮಗ ಮನೆಗೆ ಮರಳಿ ಬಾರದ ಕಾರಣ ಪಿರ್ಯಾದಿದಾರರು ಅಜ್ಜಿಗೆ ಕರೆ ಮಾಡಿ ಕೇಳಿದ್ದು ಶ್ರೀಶಾನ್ ಮನೆಗೆ ಬಂದಿಲ್ಲವಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರು ಕೂಡಲೇ ಅಲ್ಲಿಗೆ ಹೋಗಿ ಅಲಂಗಾರು ಪೆರ್ಡೂರು ಹಾಗೂ ತನ್ನ ಮನೆಯ ಸುತ್ತಮುತ್ತ ಹುಡುಕಾಡಿದ್ದು ಆತನು ಎಲ್ಲೂ ಪತ್ತೆಯಾಗಿರುವುದಿಲ್ಲ. ಶ್ರೀಶಾನ್ ಕೆ ಶೆಟ್ಟಿ ದಿನಾಂಕ 09/11/2025 ರಂದು ಮದ್ಯಾಹ್ನ 12.15 ಗಂಟೆಯಿಂದ ಸಂಜೆ 03.00 ಗಂಟೆಯ ಮಧ್ಯಾವಧಿಯಲ್ಲಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ. ಆತನನ್ನು ಬೇರೆ ಯಾರಾದರೂ ಪುಸಲಾಯಿಸಿ/ಆಮಿಷವನ್ನು ತೋರಿಸಿ ಅಪಹರಣ ಮಾಡಿರುವ ಸಾಧ್ಯತೆಯೂ ಇರುತ್ತದೆ ಎಂಬಿತ್ಯಾದಿ. ದೂರನ್ನು ನೀಡಿದ್ದು ಸದ್ರಿ ದೂರಿನಂತೆ ಠಾಣಾ ಅಕ್ರ 78/2025 ಕಲಂ: 137(2)ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ನಂತರ ಕಾಣೆಯಾದ ಶ್ರೀಶಾನ್ ಶೆಟ್ಟಿಯವರ ಬಗ್ಗೆ ಹುಡಕಾಡಿದ್ದು ದಿನಾಂಕ: 10/11/2025 ರಂದು 4:00 ಗಂಟೆಗೆಕುಕ್ಕುಂಡಿ ಹೊಳೆಬಾಗಿಲು ಮಡಿಸಾಲು ಹೊಳೆಯಲ್ಲಿ ಶ್ರೀಶಾನನ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ಮೃತನ ತಂದೆಯಾದ ಕರುಣಾಕರ ಶೆಟ್ಟಿಯವರಿಂದ ಪಿರ್ಯಾದನ್ನು ಪಡೆದುಕೊಂಡು ಠಾಣಾ ಯುಡಿಅರ್ ನಂ 42/2025 ಕಲಂ: 194 ಬಿಎನ್‌ಎಸ್‌ಎಸ್‌ರಂತೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ. ಶ್ರೀಶಾನ್ ಮೃತದೇಹದ ಮೇಲೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶವಮಹಜರನ್ನು ನಡೆಸಲಾಗಿದೆ. ನಂತರ ಘಟನಾ ಸ್ಥಳಕ್ಕೆ ಠಾಣಾಧಿಕಾರಿಯವರು ಭೇಟಿ ನೀಡಿ ತನಿಖೆಯನ್ನು ನಡೆಸಿರುತ್ತಾರೆ.
ನಂತರ ಪಿರ್ಯಾದುದಾರರು ದೂರಿನಲ್ಲಿ ನವೀನ್ ಎಂಬವರ ಜೊತೆ ಹೋಗಿರುವುದಾಗಿ ತಿಳಿಸಿದಂತೆ ನವೀನ್‌ರವರನ್ನು ಠಾಣೆಗೆ ಕರೆಯಿಸಿ ವಿಚಾರಿಸಲಾಗಿ ತಾನು ಮಧ್ಯಾಹ್ನ 12 ಗಂಟೆ ಸಮಯಕ್ಕೆ ಶ್ರೀಶಾನ್ @ ಸೋನು ಅಜ್ಜಿ ಮನೆಗೆ ಬಂದಿದ್ದವನು ನಮ್ಮ ಮನೆಗೆ ಬಂದು ಸೇತುವೆಗೆ ಹೋಗುವಾ ಎಂದು ಹೇಳಿದ್ದು /ನಾನು ನನ್ನ ಬೈಕ್ ನಲ್ಲಿ ಪೆಟ್ರೋಲ್ ಕಮ್ಮಿ ಇದೆ ಎಂದು ಹೇಳಿದಾಗ ಆತನು ಆತನ ಬೈಕನ್ನು ತರುವುದಾಗಿ ಹೇಳಿ ನಮ್ಮ ಮನೆಯ ಬಳಿಗೆ ಆತನ KA20HD4227ನೇ ಆಕ್ಟಿವಾ ಸ್ಕೂಟರನ್ನು ತೆಗೆದುಕೊಂಡು ಬಂದಿದ್ದು ನಾವಿಬ್ಬರೂ ಸ್ಕೂಟರ್‌ನಲ್ಲಿ ಕುಕ್ಕುಂಡಿ ಹೊಳೆಯ ಬಳಿಗೆ ಹೋಗಿ ಹಾಡಿಯಲ್ಲಿ ಸ್ಕೂಟರ್ ಹೋಗದ ಕಾರಣ ಹಾಡಿಯಲ್ಲೇ ಸ್ಕೂಟರನ್ನು ನಿಲ್ಲಿಸಿ ಕಾಲುದಾರಿಯಲ್ಲಿ ಹೊಳೆಗೆ ಹೋಗಿರುತ್ತೇವೆ. ಹೊಳೆಗೆ ಹೋಗುವಾಗ ಶ್ರೀಶಾನನು ತನ್ನ ಶರ್ಟ್ ಮತ್ತು ಬರ್ಮುಡ ವನ್ನು ಹಾಗೂ ಚಪ್ಪಲಿಯನ್ನು ಅಲ್ಲೆ ಗಾಡಿಯ ಬಳಿಯಲ್ಲಿ ಬಿಚ್ಚಿಟ್ಟು, ಶ್ರೀಶಾನ್ ಒಬ್ಬನೇ ಹೊಳೆಯ ನೀರಿಗೆ ಇಳಿದಿರುತ್ತಾನೆ. ನಾನು ಆಗ ಹೊಳೆಯ ದಂಡೆಯ ಬಳಿ ನಿಂತಿದ್ದೆನು. ಶ್ರೀಶಾನನು ನೀರಿನಲ್ಲಿ ನಡೆಯುತ್ತಾ ಮುಂದೆ ಮುಂದೆ ಹೋಗಿ ಕಾಲು ಜಾರಿದ್ದು ನಾನು ಆತನನ್ನು ಹಿಡಿಯಲು ಹೋಗುವುದರ ಒಳಗೆ ಆತನು ಹೊಳೆಯ ಗುಂಡಿಯ ಒಳಗೆ ಮುಳುಗಿರುತ್ತಾನೆ. ನಾನು ಹೊಳೆಯಲ್ಲಿ ಗುಂಡಿಯ ತನಕ ಹೋಗಿ ಸುಮಾರು 10 ನಿಮಿಷ ನೀರಿನಲ್ಲಿ ಹುಡುಕಾಡಿದ್ದು, ಆತನು ಕಾಣಿಸಲೇ ಇಲ್ಲ ಆತನು ನೀರಿನಲ್ಲಿ ಮುಳುಗಿರುತ್ತಾನೆ ಎಂದು ನಾನು ನದಿಯ ದಡಕ್ಕೆ ಬಂದಿರುತ್ತೇನೆ. ಆತನು ನನ್ನ ಜೊತೆಗೆ ಬಂದು ನೀರಿನಲ್ಲಿ ಮುಳುಗಿದ್ದು ಈ ಸುದ್ದಿ ಆತನ ಮನೆಯವರಿಗೆ ತಿಳಿದರೆ ನನ್ನ ಮೇಲೆ ಕೇಸ್ ಮಾಡುತ್ತಾರೆ ಎಂದು ಭಯಗೊಂಡು ನಾನು ಶ್ರೀಶಾನನ ಶರ್ಟ್, ಬರ್ಮುಡ ವನ್ನು ಹಾಗೂ ಚಪ್ಪಲಿಯನ್ನು ಸ್ಕೂಟರ್‌ನ ಡಿಕ್ಕಿಯಲ್ಲಿ ಹಾಕಿ ಮನೆಯ ಸಮೀಪದ ಹಾಡಿಯಲ್ಲಿ ಗಾಡಿಯನ್ನು ಇಟ್ಟು ಮನೆಗೆ ಹೋಗಿರುತ್ತೇನೆ. ನಾನು ಶ್ರೀಶಾನ್ ಮನೆಯವರು ನನ್ನ ಮೇಲೆ ಅರೋಪ ಮಾಡಬಹುದು ಎಂಬ ಭಯದಿಂದ ಈ ರೀತಿ ಮಾಡಿರುತ್ತೇನೆ ಹೊರತು ಬೇರೆ ಯಾವುದೇ ದುರುದ್ದೇಶ ಇರುವುದಿಲ್ಲ ಎಂತಲೂ, ನಂತರ ದಿನಾಂಕ: 09/11/2025 ರಂದು ಶ್ರೀಶಾನ್‌ನ ತಂದೆಯವರು ನನ್ನ ಬಳಿ ಶ್ರೀಶಾನನ ಬಗ್ಗೆ ಕೇಳಿದಾಗ ಆತನೊಂದಿಗೆ ಹೊಳೆಗೆ ಹೋಗಿ ಹಿಂದಿರುಗಿ ನನ್ನನ್ನು ನನ್ನ ಮನೆಯ ಬಳಿ ಬಿಟ್ಟು ಹೋಗಿರುತ್ತಾನೆ ಎಂದು ಹೇಳಿರುತ್ತಾನೆ. ಕಾರಣ ಅವರು ನನ್ನನ್ನು ಬೈಯ್ಯಬಹುದು ಅಥಾವ ಹೊಡೆಯಬಹುದು ಹಾಗೂ ನನ್ನ ಮೇಲೆ ಕೇಸ್ ದಾಖಲಿಸಹುದು ಎಂಬ ಭಯದಿಂದ ಹೇಳಿರುತ್ತೇನೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ ಎಂದು ನವೀನನು ಹೇಳಿರುತ್ತಾನೆ.
ಪ್ರಕರಣದ ತನಿಖೆಯನ್ನು ಮುಂದುವರೆಯಿಸಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಮರಣದ ವರದಿ ಹಾಗೂ ಎಫ್ ಎಸ್ ಎಲ್ ವರದಿ ಬಂದ ನಂತರ ಬೇರೆ ಏನಾದರೂ ಕುರುಹು ಕಂಡು ಬಂದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಪ್ರಕರಣದ ಬಗ್ಗೆ ಸಾರ್ಜನಿಕರು ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದು ಈ ಬಗ್ಗೆ ಮೃತರ ಸಂಬಂಧಿಕರು ಮನೆಯವರು ಗಮನ ಹರಿಸಬಾರದಾಗಿ ಕೊರಿಕೆ ಹಾಗೂ ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







