ಶಿರ್ವ ನವೆಂಬರ್ 14ರಂದು ಲಯನ್ಸ್ ಕ್ಲಬ್ ಶಿರ್ವ ಮಂಚಕಲ್ ಇದರ ವತಿಯಿಂದ ಜೀವನದ ಹಂತಗಳಲ್ಲಿ ಮಧುಮೇಹದ ಮಹತ್ವ ಇದರ ಬಗ್ಗೆ ಜಾಥ ನಡೆಯಿತು ವಿಶ್ವ ಮಧುಮೇಹ ದಿನದ ಆಚರಣೆ ಪ್ರಯುಕ್ತ ನಿರಾಮಯ ನರ್ಸಿಂಗ್ ಕಾಲೇಜು ಬಂಟಕಲ್ಲು ಇದರ ವಿದ್ಯಾರ್ಥಿಗಳು ಹಾಗೂ ಲಯನ್ಸ್ ಕ್ಲಬ್ ಶಿರ್ವ ಇದರ ಸದಸ್ಯರು ಒಟ್ಟು ಸೇರಿ ಶಿರ್ವ ಪೇಟೆಯಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿ ಜನರಿಗೆ ಮಾಹಿತಿ ಕೊಟ್ಟರು.ಶಿರ್ವ ಪೇಟೆಯಲ್ಲಿರುವ ಮಹಿಳಾ ಸೌಧದಿಂದ ಸಮುದಾಯ ಆರೋಗ್ಯ ಕೇಂದ್ರದ ವರೆಗೆ ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ಡಯಾಬಿಟಿಸ್ ಬಗ್ಗೆ ಅರಿವು ಮೂಡಿಸಲಾಯಿತು
ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಲಯನ್ಸ್ ಗವರ್ನರ್ ಲಯನ್ ಸಪ್ನಾ ಸುರೇಶ್ PMJF ಡಯಾಬಿಟಿಸ್ ಅನ್ನು ಹೇಗೆ ನಿಯಂತ್ರಿಸಬಹುದು ನಮ್ಮ ಜೀವನ ಶೈಲಿಯಲ್ಲಿ ನಾವು ಮಧುಮೇಹವನ್ನು ಹೇಗೆ ನಿಯಂತ್ರಿಸಬೇಕು, ನಾವು ತಿನ್ನುವ ಆಹಾರದಲ್ಲಿ ನಿಯಂತ್ರಣ ಇಟ್ಟುಕೊಂಡು ನಮ್ಮ ಆರೋಗ್ಯವನ್ನು ಕಾಪಾಡಬೇಕೆಂದು ಸಲಹೆ ನೀಡಿದರು
ಕಾರ್ಯಕ್ರಮದಲ್ಲಿ ನಿರಾಮಯ ನರ್ಸಿಂಗ್ ಕಾಲೇಜು ಬಂಟಕಲ್ಲು ಇದರ ಉಪಾನ್ಯಾಸಕರಾಗಿರುವ ಜೆನಿಫರ್ ಮತಾಯಸ್, ಲೋರಿಟ್ಟ ಡಿ ಸಿಲ್ವ, ಶಿರ್ವಾ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ln ವಾಲ್ಟರ್
ಮೀನೇಜಸ್, ಕಾರ್ಯದರ್ಶಿ ln ಅನಿಲ್ ಡಿಸೋಜಾ ಹಾಗೂ ಕೋಶಾಧಿಕಾರಿ ln ಜೂಲಿಯನ್ ರೋಡ್ರಿ ಗಸ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







