ದಿನಾಂಕ: 13/11/2025 ರಂದು 17:00 ಗಂಟೆಗೆ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಹನುಮಾನ್ ನಗರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜುಗಾರಿ ಆಟವನ್ನು ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ಅನೀಲ್ ಕುಮಾರ್ ಡಿ ಪೊಲೀಸ್ ಉಪನಿರೀಕ್ಷಕರು ಮಲ್ಪೆ ಪೊಲೀಸ್ ಠಾಣೆ ಇವರು ಠಾಣಾ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ನೋಡಲಾಗಿ ಅಲ್ಲಿನ ಇರುವ ಸಾರ್ವಜನಿಕ ಖಾಲಿ ಸ್ಥಳದಲ್ಲಿ 7-8 ಜನರು ನ್ಯೂಸ್ ಪೇಪರ್ ಹಾಸಿಕೊಂಡು ಕುಳಿತುಕೊಂಡಿದ್ದು, ಅಂದರ್ ಬಾಹರ್ ಎಂಬ ಇಸ್ಪೀಟ್ ಆಟ ಆಡುತ್ತಾ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 1.ಉಮೇಶ್, 2.ಸಿದ್ರಾಮೇಶ,3.ಹನುಮೇಶ, 4.ಮಲ್ಲಿಕಾರ್ಜುನ ಹಡಪದ, 5.ಶಿವಪ್ಪ ಸರದಾರ, 6.ವಿರೂಪಾಕ್ಷ, 7.ಬಸವರಾಜ, 8.ಜಗದೀಶನನ್ನು ವಿಚಾರಿಸಿದ್ದು, ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ನಂತರ ತಕ್ಷೀರು ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ ಸ್ವತ್ತುಗಳಾದ, ಹಳೆ ನ್ಯೂಸ್ ಪೇಪರ್-3, 52 ಇಸ್ಪೀಟ್ ಎಲೆಗಳು, ನಗದು ಹಣ ರೂ.5,860/- ಮತ್ತು VIVO ಮೊಬೈಲ್ ಫೋನ್-1, ಅಂದಾಜು ಮೌಲ್ಯ ರೂ. 3,000/-, SAMSUNG ಮೊಬೈಲ್ ಫೋನ್-1, ಅಂದಾಜು ಮೌಲ್ಯ ರೂ. 2,500/-, VIVO ಮೊಬೈಲ್ ಫೋನ್ -1, ಅಂದಾಜು ಮೌಲ್ಯ ರೂ.2,000/- 4.ಕೆಂಪು ಬಣ್ಣದ Honda Activa ಕಂಪೆನಿಯ ಸ್ಕೂಟರ್ KA 26 EB 8057 ಅಂದಾಜು ಮೌಲ್ಯ ರೂ 15,000/- ಸ್ವತ್ತುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 122/2025, ಕಲಂ: 87 kp Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







