ಸೈಬ್ರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಶಿರಿಯಾರ, ಸೈಬ್ರಕಟ್ಟೆ, ಯಡ್ತಾಡಿ, ಅಚ್ಲಾಡಿ ಹಾಗೂ ಕಾವಡಿಯಲ್ಲಿ ಶಾಖೆಗಳಿದ್ದು, ದಿನಾಂಕ 05.11.2025 ರಂದು ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್ ಆದ 1ನೇ ಆರೋಪಿ ಸುರೇಶ್ ಭಟ್ ಹಾಗೂ ಕಿರಿಯ ಗುಮಾಸ್ತನಾದ 2 ನೇ ಆರೋಪಿ ಹರೀಶ್ ಕುಲಾಲ್ ನಿಗೆ ಸಂಘದ ಬೇರೆ ಶಾಖೆಗೆ ವರ್ಗಾವಣೆಯಾಗಿರುತ್ತದೆ . ಕಾವಡಿ ಶಾಖೆಗೆ ಮ್ಯಾನೇಜರ್ ಆಗಿ ವರ್ಗಾವಣೆಗೊಂಡು ಬಂದಿದ್ದ ರಾಮ ರವರು 1ನೇ ಆರೋಪಿತನಾದ ಸುರೇಶ್ ಭಟ್ ರಿಂದ ಅಧಿಕಾರ ವಹಿಸಿಕೊಳ್ಳುವ ಸಮಯ ಕಾವಡಿ ಶಾಖೆಯಲ್ಲಿ ಸಂಗ್ರಹವಾದ ಸುಮಾರು 1 ಕೋಟಿ 70 ಲಕ್ಷ ಹಣ ವ್ಯತ್ಯಾಸ ಬಂದಿದ್ದರಿಂದ, ಪಿರ್ಯಾದಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರಧಾನ ಕಛೇರಿ ಸೈಬ್ರಕಟ್ಟೆ ಇವರು ಕಛೇರಿ ಸಿಬ್ಬಂದಿ ಜೊತೆ ತೆರಳಿ ಪರಿಶೀಲಿಸಿದಾಗ 1 ಕೋಟಿ 70 ಲಕ್ಷ ಹಣ ವಂಚಿಸಿರುವುದು ತಿಳಿದುಬಂದಿರುತ್ತದೆ. ಅಲ್ಲದೇ 2ನೇ ಆರೋಪಿ ಹರೀಶ್ ಕುಲಾಲ್ ಈ ಹಿಂದೆ ಕಾವಡಿ ಶಾಖೆಯಲ್ಲಿ ಆತನ ಚಿನ್ನಾಭರಣ ಅಡವಿಟ್ಟು 21 ಲಕ್ಷ ಪಡೆದಿದ್ದು ಅದನ್ನು ಪರಿಶೀಲಿಸಿದಾಗ 2ನೇ ಆರೋಪಿ ಅಡವಿಟ್ಟ ಚಿನ್ನಾಭರಣ ಇಲ್ಲದೇ ಇದ್ದು 1 ಮತ್ತು 2 ನೇ ಆರೋಪಿತರು ಸಂಘಟಿತವಾಗಿ ಸೇರಿಕೊಂಡು ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಮೋಸ ಮಾಡಿ ವಂಚಿಸುವ ಸಲುವಾಗಿ ದ್ರೋಹ ಮಾಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 205/2025 ಕಲಂ: 318(3)(4)112, 3(5) ಬಿಎನ್ ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆ ಮುಂದುವರೆದಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






