ಪಂಜಿಮಾರು ಮಸೀದಿ ರಸ್ತೆಯು ಸುಮಾರು ಏಳು ವರ್ಷಗಳಿಂದ ಡಾಮಾಲೀಕರಣವನ್ನು ಕಾಣದೆ ಸಂಪೂರ್ಣವಾಗಿ ಹದಗೆಟ್ಟಿತ್ತು ಆಗಿನ ಶಾಸಕರು ಹಾಗೂ ಸಚಿವರಾಗಿದ್ದ ಶ್ರೀ ವಿನಯ್ ಕುಮಾರ್ ಸೊರಕೆ ಅವರು ಕಡಪಾಡಿಯಿಂದ ಪಂಜಿಮಾರು ರಸ್ತೆ ಅಗಲೀಕರಣ ಮಾಡಿದ್ದು ಪಂಜಿಮಾರು ಶಿರ್ವ ಮಸೀದಿವರೆಗೆ ಕಾಮಗಾರಿ ಕಾರಣಗಳಿಂದ ಬಾಕಿ ಉಳಿದಿದ್ದು ನಂತರ ಯಾವುದೇ ರಸ್ತೆ ಕಾಮಗಾರಿ ನಡೆದಿರಲಿಲ್ಲ. ಈಗ ಪಂಜಿಮಾರು ಮರು ಡಾಮಾರಿಕರಣ ನಡೆಯುತ್ತಿತ್ತು ಜನರಿಗೆ ಸಂತೋಷವನ್ನು ತಂದಿದೆ.
ಸದ್ರಿ ರಸ್ತೆಯು ಸಂಪೂರ್ಣ ನಾದುರಸ್ತಿಯಲ್ಲಿದ್ದು ಅನೇಕ ಪ್ರತಿಭಟನೆಗಳು ನಡೆದಿದ್ದವು. ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ವತಿಯಿಂದ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆದಿತ್ತು. ನಂತರ ಶಿರ್ವ ಗ್ರಾಮೀಣ ಕಾಂಗ್ರೆಸ್ ನಿಯೋಗವು ಇಂಜಿನಿಯರ್‌ರವರನ್ನು ಸತತವಾಗಿ ಭೇಟಿ ಮಾಡಿ ರಸ್ತೆ ಡಾಮರೀಕರಣಕ್ಕೆ ಒತ್ತಾಯ ಮಾಡಿತ್ತು. ನಂತರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ಇಂಜಿನಿಯರ್ ಮುಖಾಂತರ ನಿರಂತರ ಸಂಪರ್ಕದಲ್ಲಿದ್ದು ಈಗ ಡಾಮರೀಕರಣ ಆರಂಭವಾಗಿದೆ.
ಈ ಕೆಲಸವು ಎನ್ ಹೆಚ್ ಉಪ ವಿಭಾಗ ಮಂಗಳೂರು ಇವರು ನಡೆಸಿಕೊಂಡು ಬರುತ್ತಿದ್ದು ಸಿ ಆರ್ ಐ ಎಫ್ ಫಂಡಿನಿಂದ ಈ ಕೆಲಸ ನಡೆಯುತ್ತದೆ. ಕಡಪಾಡಿಯಿಂದ ಸುಮಾರು 5.4 ಕಿಲೋಮೀಟರ್ ರಸ್ತೆಯನ್ನು ಮರು ಡಾಮರೀಕರಣ ಮಾಡಿರುತ್ತಾರೆ. ಈಗ 6 ಕೋಟಿಯಲ್ಲಿ ಉಳಿದ ಹಣ ಸುಮಾರು 60 ಲಕ್ಷದಲ್ಲಿ 1.2 ಕಿಲೋಮೀಟರ್ ರಸ್ತೆಯ ಮರು ಡಾಮಾರಿಕರಣ ಈಗ ಪ್ರಾರಂಭವಾಗಿದೆ, ಅದರಲ್ಲಿ ಉಳಿದ ರಸ್ತೆಯ ಕಾಮಗಾರಿಯನ್ನು ಉಡುಪಿ ಪಿಡಬ್ಲ್ಯೂಡಿ ಸಂಸ್ಥೆಯಿಂದ ನಡೆಯಲಿದೆ ಎಂದು ಮಂಗಳೂರಿನ ಎನ್ ಹೆಚ್ ಉಪ ವಿಭಾಗದ ಇಂಜಿನಿಯರ್ ಪ್ರಸನ್ನ ಕುಮಾರ್ ತಿಳಿಸಿರುತ್ತಾರೆ
ಮಸೀದಿಯಿಂದ ಪಿಲಾರ್ ಕಾನದವರೆಗೆ ಗುಂಡಿ ಮುಚ್ಚುವ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು ಸಂಪೂರ್ಣವಾಗಿ ಹದಗೆಟ್ಟಿದ್ದ ನ್ಯಾರ್ಮ ರಸ್ತೆಯು ಮರು ಡಾಮಾರಿಕರಣ ಮಾಡಬೇಕೆಂದು ಜನರ ಆಕ್ರೋಶವಿದ್ದು ಆ ರಸ್ತೆ ಗೋಸ್ಕರ ಹೊಸ ಟೆಂಡರ್ ಕರೆದಿದ್ದು ಇನ್ನು ಎರಡು ಅಥವಾ ಮೂರು ದಿವಸಗಳಲ್ಲಿ ಆ ಟೆಂಡರ್ ಪ್ರತಿಕೆ ಮುಗಿಯುತ್ತಿದ್ದು ಕಾಂಟ್ರಾಕ್ಟರ್ ದಾರರಿಗೆ ಈ ಕೆಲಸವನ್ನು ವಹಿಸಿ ಕೊಡುವುದಾಗಿ ಉಡುಪಿ ಪಿ ಡಬ್ಲ್ಯೂ ಡಿ ವಿಭಾಗದ ಅಸಿಸ್ಟೆಂಟ್ ಇಂಜಿನಿಯರ್ ಸಾಗರ್ ಇವರು ತಿಳಿಸಿರುತ್ತಾರೆ
ನ್ಯಾರ್ಮ ರಸ್ತೆಯನ್ನು ವೆಟ್ ಮಿಕ್ಸ್ ಹಾಕಿ ತಾತ್ಕಾಲಿಕವಾಗಿ ಸರಿಪಡಿಸಲಾಗಿದೆ ಆದರೆ ವಾಹನಗಳು ಸಂಚರಿಸುವಾಗ ಅತಿಹೆಚ್ಚಿನ ಧೂಳು ಹಬ್ಬುತ್ತಿದೆ .ಹತ್ತಿರದಲ್ಲಿ ಶಾಲೆ ಇರುವ ಕಾರಣ ಮಕ್ಕಳು ನಡೆದುಕೊಂಡು ಹೋಗುವಾಗ ದ್ವಿಚಕ್ರ ವಾಹನಗಳಿಗೆ ವಾಹನ ಸವಾರರಿಗೆ ಹಾಗೂ ಅಲ್ಲಿ ಹತ್ತಿರದ ಮನೆಗಳಿಗೆ ಎಲ್ಲಾ ಧೂಳನ್ನು ಸೇವಿಸುವಂತಹ ಪರಿಸ್ಥಿತಿ ಇದೆ. ಈ ರಸ್ತೆ ಸಂಪೂರ್ಣವಾಗಿ ಡಾಮರೀಕರಣ ಆಗುವ ತನಕ ನೀರನ್ನು ಸಿಂಪಡಿಸಿ ಈದೂಳು ಹಬ್ಬುದನ್ನು ನಿಯಂತ್ರಿಸಿಗೋಸ್ಕರ ಕಾಂಟ್ರಾಕ್ಟ್ ಗರಿಗೆ ನಿರ್ದೇಶನವನ್ನು ನೀಡಲಾಗಿದೆ ಎಂದು ಉಡುಪಿ pwd A E ಸಾಗರ್ ರವರು ಮಾಧ್ಯಮದವರಿಗೆ ತಿಳಿಸಿರುತ್ತಾರೆ







