ಹಿರಿಯಡಕ ಸರಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಒಬ್ಬ ಹುಡುಗ ದಿನಾಂಕ 09/11/2025ರಂದು 12.15 ಗಂಟೆಗೆ ಆತನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪೆರ್ಡೂರಿಗೆ ಹೋಗಿದ್ದು, ಅಲ್ಲಿ ತಂದೆಯನ್ನು ಬಿಟ್ಟು ಅಜ್ಜಿ ಮನೆಯಾದ ಅಲಂಗಾರಿಗೆ ಹೋಗಿ ಅಜ್ಜಿ ಮೊಬೈಲ್ ನಿಂದ ತಂದೆಗೆ ಕರೆ ಮಾಡಿ ತಾನು ಅಜ್ಜಿಯ ಮನೆಯ ಬಳಿ ಇರುವ ನದಿಗೆ ಆಟವಾಡಲು ಹೋಗುವುದಾಗಿ ತಿಳಿಸಿರುತ್ತಾನೆ. ಮದ್ಯಾಹ್ನ 03.00 ಗಂಟೆಯಾದರೂ ಮಗ ಮನೆಗೆ ಮರಳಿ ಬಾರದ ಕಾರಣ ಆತನ ಅಜ್ಜಿಗೆ ಕರೆ ಮಾಡಿ ಕೇಳಿದ್ದು, ಆ ಹುಡುಗನು ಅಜ್ಜಿ ಮನೆಗೆ ಬಂದಿಲ್ಲವಾಗಿ ತಿಳಿಸಿರುತ್ತಾರೆ. ಕೂಡಲೇ ತಂದೆಯು ಅಲಂಗಾರು ಪೆರ್ಡೂರು ಹಾಗೂ ತನ್ನ ಮನೆಯ ಸುತ್ತಮುತ್ತ ಹುಡುಕಾಡಿದ್ದು ಆತನು ಎಲ್ಲೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಆತನ ತಂದೆಯನ್ನು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕಮಾಂಕ : 78/2024 ಕಲಂ: 137(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಇತನ ಪತ್ತೆಗಾಗಿ ಹುಡುಕಾಡಿದ್ದು ಈ ದಿನ ಪೆರ್ಡೂರು ಅಡಪಾಡಿಯ ಮಡಿಸಾಲು ಹೊಳೆಯಲ್ಲಿ ಈತನ ಮೃತ ದೇಹ ಪತ್ತೆಯಾಗಿರುತ್ತದೆ. ಈತನು ಹೊಳೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಿಸಿಕೊಳ್ಳಲಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







