ದಿನಾಂಕ: 08/11/2025 ರಂದು 22:00 ಗಂಟೆಗೆ ಉಡುಪಿ ತಾಲೂಕು ಹೆರ್ಗ ಗ್ರಾಮದ ಈಶ್ವನಗರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಇರುತ್ತಾ Dee Tee ಬಾರ್ & ರೆಸ್ಟೋರೆಂಟ್ ನ ಮುಂಭಾಗದಲ್ಲಿ ರಸ್ತೆಯ ಬಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಚಂದನ್, ಅಮರ್ ಶೆಟ್ಟಿ, ಧನುಷ್, ನಿತೇಶ್, ಸುಜನ್, ನಿನಾದ್ ಅಜಯ್ ರವರುಗಳು Dee Tee ಬಾರ್ & ರೆಸ್ಟೋರೆಂಟ್ ನಲ್ಲಿ ಊಟ ಮಾಡುತ್ತಿರುವಾಗ ಚಂದನ್ ಎಂಬಾತನ ಕೈ ಅಮರ್ ಶೆಟ್ಟಿಯ ಮೈಗೆ ತಾಗಿದ ವಿಚಾರದಲ್ಲಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡು ಬೈದಾಡಿಕೊಂಡಿದ್ದು, ಸದ್ರಿ ವೀಡಿಯೋ ಸಾಮಾಜಿಕ ಜಾಲ ತಾಣದಾಣಗಳಲ್ಲಿ ಹರಿದಾಡಿರುತ್ತದೆ.

ಈ ಘಟನೆಯ ಬಗ್ಗೆ ರಾತ್ರಿ ದೋಸ್ತು ಕರ್ತವ್ಯದ ಎ.ಎಸ್.ಐ ಮೋಹನ್ ದಾಸ್ ರವರು ನೀಡಿದ ದೂರಿನಂತೆ ಆರೋಪಿತರುಗಳ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2025 ಕಲಂ: 194(2) ಬಿ.ಎನ್.ಎಸ್ -2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿತರುಗಳಾದ ಅಮರ್ ಶೆಟ್ಟಿ, ಚಂದನ್ ಸಿ ಸಾಲ್ಯಾನ್, ಧನುಷ್, ಅಜಯ್ ಇವರುಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







