ದಿನಾಂಕ 31-10-2025 ರಂದು ಬೆಳಿಗ್ಗೆ 8:30 ಗಂಟೆಗೆ ಜಿಲ್ಲಾDAR ಕೇಂದ್ರ ಕಚೇರಿ ಚಂದು ಮೈದಾನ ಉಡುಪಿ ಇಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಅಭ್ಯರ್ಥಿಗಳಿಗೂ ಹಾಗೂ ಸೈಬರ್ ಭದ್ರತಾ ಜಾಗೃತಿ ಮಾಸಾಚರಣೆ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಾಗುವುದು.
• ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಅಕ್ಟೋಬರ್ 2025 – ಸೈಬರ್ ಜಾಗೃತಿ ಮಾಸಾಚರಣೆ ಅಂಗವಾಗಿ ಅಕ್ಟೋಬರ್ 10 ರಿಂದ ಅಕ್ಟೋಬರ್ 30ರವರೆಗೆ #CyberJagruthiUdupi ಮತ್ತು #CyberSafeUdupi ಹ್ಯಾಶ್ಟ್ಯಾಗ್ ನೊಂದಿಗೆ ವಿಶೇಷ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಮಾಡಲಾಯಿತು
• ಸಾರ್ವಜನಿಕರು ಹಾಗೂ ಪೊಲೀಸ ರಿಂದ ಸೈಬರ್ ಸುರಕ್ಷತೆ ಕುರಿತಾಗಿ ರೀಲ್‌ಗಳು, ಮೀಮ್ಸ್‌ಗಳು ಅಥವಾ ಚಿತ್ರಗಳು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ #CyberJagruthiUdupi ಮತ್ತು #CyberSafeUdupi ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಪೋಸ್ಟ್ ಮಾಡಲು ಆಹ್ವಾನಿಸಿದ್ದು ಸಾರ್ವಜನಿಕರು 4 ಮೆಮ್ಸ್, 12 ರೀಲ್ಸ್, 6 ಡ್ರಾಯಿಂಗ್ ಹಾಗೂ ಪೊಲೀಸರಿಂದ ಪ್ರತ್ಯೇಕವಾಗಿ 10 ರೀಲ್ಸ್/ ವಿಡಿಯೋ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
• ಉಡುಪಿ ಜಿಲ್ಲಾ ಪೊಲೀಸ್ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸೈಬರ್ ಭದ್ರತಾ ಜಾಗೃತಿ ಮಾಸಾಚರಣೆ ಪ್ರಯುಕ್ತ ಅಕ್ಟೋಬರ್ 15 ರಿಂದ 30 ರವರೆಗೆ 20 ಸೈಬರ್ ಜಾಗೃತಿ ಪೋಸ್ಟ ಗಳು ಹಾಗೂ 25  ಸೈಬರ್ ಜಾಗೃತಿ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿರುತ್ತದೆ.
• ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಸೈಬರ್ ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ನಗರದ ಸಿನಿಮಾ ಚಿತ್ರಮಂದಿರಗಳಲ್ಲಿ ಸೈಬರ್ ಜಾಗೃತಿ ವಿಡಿಯೋ ವನ್ನು ಪ್ರಸಾರ ಮಾಡಲಾಯಿತು.
• ಉಡುಪಿ ಜಿಲ್ಲೆಯಾದ್ಯಂತ ಸೈಬರ್ ಭದ್ರತಾ ಮಾಸಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಪೊಲೀಸರು ಸುಮಾರು 74 ಶಾಲಾ/ ಕಾಲೇಜು ಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಸೈಬರ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಿ ಮತ್ತು 5037 ಜನರಿಗೆ ಸೈಬರ್ ಸುರಕ್ಷತೆ ಬಗ್ಗೆ ಪ್ರತಿಜ್ಞೆ ಯನ್ನು ನೀಡಲಾಯಿತು.
• ಆನ್ಲೈನ್ ಮೂಲಕ ಸೈಬರ್ ಸುರಕ್ಷತೆ ಬಗ್ಗೆ ಪ್ರತಿಜ್ಞೆ ತೆಗೆದುಕೊಳ್ಳಲು ಲಿಂಕ್ ನೀಡಿದ್ದು,ಇದರಲ್ಲಿ 666 ಜನರು ಪ್ರಮಾಣಪತ್ರವನ್ನು ಇಮೇಲ್ ಮೂಲಕ ಪಡೆದಿದ್ದಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ
 
			 
		    






