ಮಂಗಳೂರು(ದಕ್ಷಿಣ ಕನ್ನಡ): ಸಂಗೀತದ ಸೂಕ್ಷ್ಮತೆಯೊಂದಿಗೆ ಈಜುವ ಕಲೆಯನ್ನು ಸಂಯೋಜಿಸಿ ಅದ್ಭುತ ಸಾಧನೆಯೊಂದನ್ನು ಮಂಗಳೂರಿನ 29 ವರ್ಷದ ಯುವಕನೋರ್ವ ಮಾಡಿದ್ದಾರೆ.
ಮಂಗಳೂರಿನ ಬಹುಮುಖ ಪ್ರತಿಭೆ ಸಂಗೀತಗಾರ ರುಬೆನ್ ಜೇಸನ್ ಮಚದೋ, ಸಂತ ಅಲೋಯ್ಸಿಯಸ್ ಕಾಲೇಜು (ಡೀಮ್ಡ್ ಟು ಬಿ ಯೂನಿವರ್ಸಿಟಿ) ಸ್ವಿಮ್ಮಿಂಗ್ ಪೂಲ್ನಲ್ಲಿ ಬುಧವಾರ(ಅ.29) ಬೆಳಗ್ಗೆ 10 ಗಂಟೆಗೆ ಕೊಳಲು (Flute) ನುಡಿಸುತ್ತಾ ಬೆನ್ನು ಹಿಂದೆ ಹಾಕಿ (Backstroke) 700 ಮೀಟರ್ಗೂ ಹೆಚ್ಚು ದೂರ ಈಜಿ ವಿಶ್ವದ ಮೊದಲ ದಾಖಲೆಯನ್ನು ಸೃಷ್ಟಿಸಿದ್ದಾರೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (GBWR) ಸಂಸ್ಥೆಯು ಈ ಸಾಧನೆಯನ್ನು ಗುರುತಿಸಿ, ಅಧಿಕೃತ ಪ್ರಮಾಣಪತ್ರವನ್ನು ನೀಡಿದ್ದು, ವಿಡಿಯೋ ಪರಿಶೀಲನೆಯ ನಂತರ ನಿಖರ ದೂರವನ್ನು ಘೋಷಿಸುವುದಾಗಿ ತಿಳಿಸಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ
 
			 
		    






