ದಿನಾಂಕ: 26.10.2025 ರಂದು ಸಂಜೆ ಪಿರ್ಯಾದು ನಾಸಿರ್ ಹುಸೇನ್ ಪಿಎಸ್ಐ (ಕಾ&ಸು), ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಇಸ್ಪೀಟು ಜುಗಾರಿ ಆಟದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಮರಾಸಿ ರಸ್ತೆಯಲ್ಲಿ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ – ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದವರ ಮೇಲೆ 18:20 ಗಂಟೆಗೆ ದಾಳಿ ನಡೆಸಿದ್ದು ಇಸ್ಪೀಟ್ ಜುಗಾರಿ ಆಡುತ್ತಿದ್ದ 4 ಜನರನ್ನು ವಶಕ್ಕೆ ಪಡೆದಿದ್ದು ವಿಚಾರಿಸಲಾಗಿ 1) ಅನಿಲ್(31), ಬಾಳಿಕೆರೆ, ದೇವಲ್ಕುಂದ ಗ್ರಾಮ ಕುಂದಾಪುರ, 2) ಪೂರ್ಣೇಶ (25), ಬಾಳಿಕೆರೆ ದುರ್ಗಾ ನಗರ ದೇವಲ್ಕುಂದ ಗ್ರಾಮ, ಕುಂದಾಪುರ, 3) ರಘು(39), ಹಂದಾರಕಟ್ಟೆ ಕೆಂಚನೂರು, ಕೆಂಚನೂರು ಗ್ರಾಮ, ಕುಂದಾಪುರ, 4) ಯೋಗೀಶ(39), ಮೂಡಾಯನ ಮನೆ, ಬಾಳಿಕೆರೆ ದೇವಲ್ಕುಂದ ಗ್ರಾಮ, ಕುಂದಾಪುರ ಎಂಬುವುದಾಗಿ ತಿಳಿಸಿರುತ್ತಾರೆ. ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ ಪ್ಲಾಸ್ಟಿಕ್ ಶೀಟ್ ಮೇಲೆ ಇದ್ದ ಒಟ್ಟು 1)2480/- ರೂಪಾಯಿ, 2) ನೀಲಿ ಬಣ್ಣದ ಪ್ಲಾಸ್ಟಿಕ್ -1, 3) 52 ಇಸ್ಪೀಟ್ ಎಲೆಗಳು, 4) ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ, 5) Oppo F17Pro ಮೊಬೈಲ್-1, 6) Oppo F17Pro ಮೊಬೈಲ್-1 ಅನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 66/2025 ಕಲಂ. 87 KP Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







