ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 210/2025 U/s. 9B(1)(b) Explosive Act 1984 ಹಾಗೂ 287 ಮತ್ತು 288 BNS ರಲ್ಲಿ ಆರೋಪಿತ ಶಿವಾನಂದ ರಾವ್(50), ಕುಂಜಾಲು, ಆರೂರು ಗ್ರಾಮ, ಬ್ರಹ್ಮಾವರ ತಾಲೂಕು ಈತನು ಬ್ರಹ್ಮಾವರ ತಾಲ್ಲೂಕು ಆರೂರು ಗ್ರಾಮದ ಕುಂಜಾಲ್ ಎಂಬಲ್ಲಿರುವ ಮನೆಯ ಪಕ್ಕದ ಶ್ಯಾಮಿಯಾನ ಗೋಡಾನ್ ನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಟಾಕಿ ಸ್ಪೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ದಾಸ್ತಾನು ಮಾಡಿದ ಸುಮಾರು 35,000.00 ರೂಪಾಯಿ ಮೌಲ್ಯದ 16 ಬಾಕ್ಸ್ ವಿವಿಧ ಬ್ರಾಂಡ್‌ಗಳ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಯಿತು.
ಕೋಟ ಪೊಲಿಸ್ ಠಾಣೆ ಅಪರಾಧ ಕ್ರಮಾಂಕ 185/2025 ಕಲಂ 287, 288 ಬಿ.ಎನ್.ಎಸ್.(BNS) 2023 ಮತ್ತು 9(B), 1(b) Explosive Act. ರಲ್ಲಿ ಆರೋಪಿತ ಕೆ. ಪ್ರಶಾಂತ ಜೋಗಿ (44) ಮಹಾಲಿಂಗೇಶ್ವರ ದೇವಸ್ಥಾನದ ಬಳಿ ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲ್ಲೂಕು ಈತನು ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಈತನ ಮನೆಯ ಬಳಿಯ ಶೆಡ್ ನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಟಾಕಿ ಸ್ಪೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ದಾಸ್ತಾನು ಮಾಡಿದ ಸುಮಾರು 1,61,372.00 ರೂಪಾಯಿ ಮೌಲ್ಯದ 332 ಬಾಕ್ಸ್ ವಿವಿಧ ಬ್ರಾಂಡ್‌ಗಳ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಯಿತು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ