ದಿನಾಂಕ 23/02/2011 ರಂದು ಶ್ರೀ ಕೃಷ್ಣಾನುಗ್ರಹ ಅರ್ಹ ಸಂಸ್ಥೆ ಮತ್ತು ದತ್ತು ಸ್ವಿಕಾರ ಕೇಂದ್ರ ವಸುಂಧರಾ ನಗರ ಮಲ್ಪೆ ಆಶೀರ್ವಾದ ಸಂತೆಕಟ್ಟೆ ನಲ್ಲಿ ಆಶ್ರಯ ಪಡೆಯುತ್ತಿದ್ದ ಸಂತೋಷ (12) ಎಂಬ ಮಾನಸಿಕ ಅಸ್ವಸ್ಥ ಹಾಗೂ ಬುದ್ದಿ ಮಾಂದ್ಯ ಬಾಲಕ ರಾತ್ರಿ ಎಂದಿನಂತೆ ಕೋಣೆಯಲ್ಲಿ ಮಲಗಿದ್ದು , ಮರುದಿನ ಬೆಳೀಗ್ಗೆ ನೋಡಿದಾಗ ಸಂಸ್ಥೆನಿಂದ ಕಾಣೆಯಾಗಿರುವುದಾಗಿ, ಆ ಸಂಸ್ಥೆಯ ಕೊ-ಆರ್ಡಿನೆಟರ್ ಆದ ಮೆರಿನಾ ಎಲಿಜಬೆತ್ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯ ಅಪರಾಧ ಕ್ರಮಾಂಕ 70/2011 ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣ ತನಿಖೆಯ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪ್ರಸ್ತುತ ಕಾರ್ಕಳದ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿ 2018ನೇ ವರ್ಷಗಳಿಂದ ಆಶ್ರಯ ಪಡೆಯುತ್ತಿರುವ ಬಿಪಿನ್ ಎಂಬ ಹೆಸರಿನ ಹುಡುಗನನ್ನು ನೋಡಿ ಗಮನಿಸಲಾಗಿ ಕಾಣೆಯಾದ ಸಂತೋಷನಿಗೆ ಹೋಲಿಕೆಯಾಗುತ್ತಿರುವ ಬಗ್ಗೆ ಅವನ ಮುಖ ಚಹರೆ, ಈಗಿನ ಅಂದಾಜು ಪ್ರಾಯ, ಕುಳಿತುಕೊಳ್ಳುವ ಭಂಗಿ, ಸಂಪೂರ್ಣ ಚಲನವಲನದ ಬಗ್ಗೆ ಖಚಿತಪಡೆಸಿಕೊಂಡು, ಪಿರ್ಯಾದುದಾರರಾದ ಮೆರಿನಾ ಎಲಿಜಬೆತ್ ಹಾಗೂ ಸಂತೋಷ ಕಾಣೆಯಾದ ಸಮಯದಲ್ಲಿ ಆ ಸಂಸ್ಥೆನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಸಿಬ್ಬಂದಿ ಶಾಂತಿ ರವರ ಜೊತೆಯಾಗಿ ವಿಜೇತ ವಿಶೇಷ ಮಕ್ಕಳ ಶಾಲೆಗೆ ತೆರಳಿ ಅಲ್ಲಿದ್ದ ಬಿಪಿನ್ ನನ್ನು ತೋರಿಸಿ ವಿಚಾರಿಸಿದಲ್ಲಿ ಅವನ ಮುಖ ಚಹರೆ, ಚಲನ ವಲನವನ್ನು ನೋಡಿ ಸಂತೋಷನಿಗೆ ಹೋಲಿಕೆ ಕಂಡುಬರುತ್ತಿದ್ದು, ಈತನೇ ಸಂತೋಷ ಎಂಬುದಾಗಿ ತಿಳಿಸಿರುತ್ತಾರೆ.
ಸದ್ರಿ ಬಾಲಕನು ಬುದ್ದಿ ಮಾಂಧ್ಯ ಹಾಗೂ ಮಾನಸಿಕ ಅಸ್ವಸ್ಥನಾಗಿರುವ ಸಲುವಾಗಿ ಅವನ ಪೋಷಕರು ಪತ್ತೆಯಾಗುವ ತನಕ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿಯೇ ಪಾಲನೆ ಮಾಡುವ ಬಗ್ಗೆ ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೀಡಿದ ಸಲಹೆಯಂತೆ ಕಾರ್ಕಳದ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿಯೇ ಇರಿಸಲಾಗಿದೆ.
ಸದರಿ ಪತ್ತೆ ತಂಡದಲ್ಲಿ ಪ್ರಭು ಡಿ ಟಿ ಪೋಲಿಸ್ ಉಪಾಧಿಕ್ಷಕರು ಉಡುಪಿ ಉಪ ವಿಭಾಗ, ಸುದರ್ಶನ ದೊಡಮನಿ, ಪೋಲಿಸ್ ಉಪ ನಿರೀಕ್ಷಕರು ಬ್ರಹ್ಮಾವರ, ಈರಣ್ಣ ಶಿರಗುಂಪಿ, ಪೋಲಿಸ್ ಉಪ ನಿರೀಕ್ಷಕರು ಉಡುಪಿ ನಗರ ಠಾಣೆ ಹೆಚ್ಸಿ ಇಮ್ರಾನ್, ಹೆಚ್ಸಿ ಚೇತನ್, ಪಿಸಿ ಸಂತೋಷ ದೇವಾಡಿಗ, ಪಿಸಿ ಮಲ್ಲಯ್ಯ ಹಿರೇಮಠ ಅವರನ್ನೊಳಗೊಂಡ ತಂಡ ಈತನನ್ನು ಪತ್ತೆ ಹಚ್ಚಿರುತ್ತಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ