ರಾಷ್ಟ್ರೀಯ ಸೇವಾ ಯೋಜನೆ, ವಾರ್ಷಿಕ ವಿಶೇಷ ಶಿಬಿರವನ್ನು ಸಂತ ಲಾರೆನ್ಸ್ ಪ್ರೌಢಶಾಲಾ ಸುವರ್ಣ ಮಹೋತ್ಸವ ಸಭಾಭವನ, ಮೂಡುಬೆಳ್ಳೆ, ಇದರಲ್ಲಿ ನಡೆಸಲಾಯಿತು. ಈ ಶಿಬಿರದಲ್ಲಿ ಪಿಎಸ್‌ಐ ( ಕ್ರೈಮ್ ) ಲೋಹಿತ್ ಕುಮಾರ್, ಹೆಡ್ ಕಾನ್ಸಬಲ್ ಶ್ರೀ ಮಂಜುನಾಥ ಅಡಿಗ ರವರು ಭಾಗವಹಿಸಿ ನಶಾಮುಕ್ತ ಭಾರತ ಇದರ ಕುರಿತು ಉಪನ್ಯಾಸ ನೀಡಿದರು.
ಇಂದಿನ ಕಾಲದಲ್ಲಿ ನಶಾ ಪದಾರ್ಥಗಳು ಹಾಗೂ ವ್ಯಸನವು ಸಮಾಜಕ್ಕೆ ದೊಡ್ಡ ಶತ್ರುವಾಗಿದೆ. ಮದ್ಯಪಾನ, ಗಾಂಜಾ, ತಂಬಾಕು, ಡ್ರಗ್ಸ್ ಮುಂತಾದವು ಯುವಜನತೆಯನ್ನು ತಪ್ಪು ದಾರಿಯಲ್ಲಿ ಕೊಂಡೊಯ್ಯುತ್ತದೆ.
ನಶಾ ಸೇವನೆಯಿಂದ ನಮ್ಮ ದೇಹವು ಹಾಳಾಗುತ್ತದೆ. ಹಣ ವ್ಯರ್ಥವಾಗುತ್ತದೆ ಮತ್ತು ಕುಟುಂಬದ ಶಾಂತಿ ಕಳೆದುಹೋಗುತ್ತದೆ. ಯುವಕರು ದೇಶದ ಶಕ್ತಿ, ಆದರೆ ಅವರೇ ನಶೆಗೆ ಬಲಿಯಾದರೆ ದೇಶ ದುರ್ಬಲವಾಗುತ್ತದೆ.
ನಶಾಮುಕ್ತ ಭಾರತಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕ. ಶಾಲೆಗಳಲ್ಲಿ ಯೇ ವಿದ್ಯಾರ್ಥಿಗಳಿಗೆ ನಶಾದ ದುಷ್ಪರಿಣಾಮಗಳನ್ನು ತಿಳಿಸಬೇಕು. ಸಮಾಜ ಸೇವಾ ಸಂಘಗಳು, ಯುವಕ ಸಂಘಗಳು ಹಾಗೂ ಮಾಧ್ಯಮಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.
ಪ್ರತಿಯೊಬ್ಬ ಯುವಕ ಯುವತಿ ನಶೆಗೆ ಇಲ್ಲ ಎಂದು ನಿರ್ಧರಿಸಿದಾಗ ಮಾತ್ರ ನಿಜವಾದ ನಶಾ ಮುಕ್ತ ಭಾರತ ನಿರ್ಮಾಣವಾಗುತ್ತದೆ. ನಾವೆಲ್ಲರೂ ಕೈ ಜೋಡಿಸಿದಾಗ ನಶಾಮುಕ್ತ ಭಾರತದ ಕನಸು ಸಾಕಾರವಾಗುವುದು ಖಚಿತ.
ಈ ಶಿಬಿರದಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಸುಮಾರು 40 ವಿದ್ಯಾರ್ಥಿಗಳು ಪಾಲ್ಗೊಂಡರು. ವೇದಿಕೆಯಲ್ಲಿ ಶಿರ್ವ ಸಂತ ಮೇರಿ ಕಾಲೇಜಿನ NSS ಅಧಿಕಾರಿ ಶ್ರೀಮತಿ ಜೆಸಿಂತ ಮರಿಯ ಫುರ್ಟಾಡೊ, ಹಾಗೂ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಪ್ರಭಾ ಶೆಣೈ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಸುಜಾತ ಅಮೀನ್ ರವರು ಉಪಸ್ಥಿತರಿದ್ದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ