ಶಿರ್ವ : ಸೈಬರ್ ವಂಚಕರು ಪೋಲಿಸ್ ಅಧಿಕಾರಿಯೆಂದು ನಂಬಿಸಿ ಶಿರ್ವದ ವ್ಯಕ್ತಿಯೋರ್ವರಿಗೆ ಬ್ಯಾಂಕ್ ಖಾತೆಯಿಂದ ರೂ. 4 ಲಕ್ಷ ಹತ್ತು ಸಾವಿರ ಮೊತ್ತದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿರ್ವದ ಲಿನೆಟ್ ಮೆಂಡೋನ್ಸರವರಿಗೆ ಸೆ.18 ರಂದು ವಾಟ್ಸ್ ಆಪ್ ನಲ್ಲಿ ವಿಡಿಯೋ ಕಾಲ್ ಬಂದಿದೆ. ಕರೆ ಮಾಡಿದ ವ್ಯಕ್ತಿಯು ನಿಮ್ಮ ಮೇಲೆ ಕೇಸು ಇದೆ ನಿಮ್ಮ ನಂಬರ್ ಬ್ಲಾಕ್ ಮಾಡುತ್ತೇವೆ. ನೀವು ಗೂಂಡಾಗಿರಿಯಲ್ಲಿ ಒಳಗೊಂಡಿದ್ದೀರಿ ಗೂಂಡಾಗಿರಿಯಲ್ಲಿ ಮಾಡಿದ ಹಣ ಕೂಡಾ ನಿಮ್ಮ ಬ್ಯಾಂಕ್ ಖಾತೆಯಲ್ಲಿರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಉಳಿಯಬೇಕಾದರೆ ಕೂಡಲೇ ನಾನು ತಿಳಿಸಿದ ಖಾತೆಗೆ ಹಾಕುವಂತೆ ಒಂದು ಪಿಡಿಎಪ್ ಪೈಲ್ ಕಳುಹಿಸಿದ್ದಾನೆ.
ಆತನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದು, ವಿಡಿಯೋ ಕಾಲ್ ಮಾಡಿದ ವ್ಯಕ್ತಿಯು ಪೊಲೀಸ್ ಸಮವಸ್ತ್ರದಲ್ಲಿದ್ದನು. ಅಲ್ಲದೆ ವಿಡಿಯೋ ಕಾಲ್ ಕರೆಯನ್ನು ಕಟ್ ಮಾಡಬಾರದು ಬೇರೆ ಯಾರಿಗೂ ಮಾಹಿತಿ ನೀಡಬಾರದು ಎಂದು ತಿಳಿಸಿರುತ್ತಾನೆ.
ಅದರಂತೆ ಲಿನೆಟ್ ರವರು ತನ್ನ ಖಾತೆಯಲ್ಲಿದ್ದ ರೂ. 4,10,000 ಹಣವನ್ನು ಆತನು ತಿಳಿಸಿದ ಖಾತೆಗೆ ಆರ್ಟಿಜಿಸ್ ಮಾಡಿರುತ್ತಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ