ಸಂತ ಮೇರಿ ಕಾಲೇಜು, ಶಿರ್ವ ಇದರ ವತಿಯಿಂದ ಕಾಲೇಜು ಆವರಣದಲ್ಲಿ ದಿನಾಂಕ 20-09-2025 ರಂದು ಬೆಳಿಗ್ಗೆ 10.00 ಗಂಟೆಗೆ ಮಾದಕ ದ್ರವ್ಯ ಜಾಗೃತ ಸಮಿತಿಯ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಶಿರ್ವ ಠಾಣಾ PSI ಶ್ರೀ ಮಂಜುನಾಥ ಮರ್ಬಾದ್ ರವರು ಮಾತನಾಡಿ -ಆರಕ್ಷಕ ಠಾಣೆಯಿಂದ ಹಂಚಿಕೊಂಡ QR ಕೋಡ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಭಯವಿಲ್ಲದೆ QR ಕೋಡ್ ಬಳಸಿಕೊಂಡು ಅಪರಾಧದ ಮಾಹಿತಿಯನ್ನು ಠಾಣೆಗೆ ನೀಡಬಹುದು. ಅವರ ಹೆಸರು ಬಹಿರಂಗಗೊಳಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಅಪರಾಧಗಳ ಬಗ್ಗೆ ಮಾಹಿತಿ, ತಿಳಿದು ಹಾಗೂ ತಿಳಿಯದೆ ಮಾಡುವ ಅಪರಾಧಗಳಿಗೆ ಏನು ಶಿಕ್ಷೆ ಎಂಬ ಮಾಹಿತಿ ನೀಡಲಾಯಿತು. ಡ್ರಗ್ಸ್ ಒಂದು ದಂದೆಯಾಗಿ ಬೆಳೆಯುತ್ತಿದೆ. ಈ ಪಿಡುಗಿನ ಬಗ್ಗೆ ಬೀದಿನಾಟಕಗಳ ಮೂಲಕ ಸಮಾಜಕ್ಕೆ ಅರಿವ ಉಂಟುಮಾಡುವ ಬಗ್ಗೆ ಸೂಚಿಸಲಾಯಿತು. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮೀಟಿಂಗ್ ನಡೆಸಿ, ಮಾದಕ ದ್ರವ್ಯ ಸೇವನೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಂವಾದವನ್ನು ನಡೆಸಲಾಯಿತು.

ಈ ಸಭೆಗೆ 300 ವಿದ್ಯಾರ್ಥಿಗಳು ಬಾಗವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ಶ್ರೀ ಹೆರಾಲ್ಡ್ ಮೋನಿಸ್, ಶಿರ್ವ ಠಾಣಾ PSI ಶ್ರೀ ಮಂಜುನಾಥ ಮರ್ಬಾದ್, ಉಪನ್ಯಾಸಕರಾದ ಶ್ರೀ ಪ್ರವೀಣ್ ರವರು ಉಪಸ್ಥಿತರಿದ್ದರು. ಅಧ್ಯಕ್ಷರು, ನೋಡಲ್ ಅಧಿಕಾರಿಗಳು, ಸಂಯೋಜಕರು, ಸದಸ್ಯರು,ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಶಿರ್ವ ಠಾಣಾ ಪೋಲಿಸ್ ಸಿಬಂದಿಗಳು ಹಾಜರಿದ್ದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ