ಶಿರ್ವ ರೋಜರಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಸಂಸ್ಥೆಯಲ್ಲಿ ಶಿರ್ವ ಸೈಬರ್ ಕ್ರೈಂ ಠಾಣಾಧಿಕಾರಿಯವರು ಅಗತ್ಯ ಹಾಗೂ ತುರ್ತು ಪರಿಸ್ಥಿತಿಯ ಸಂಖ್ಯೆಗಳಿರುವ ಫಲಕವನ್ನು ಅಳವಡಿಸಿ, ಸೈಬರ್ ಅಪರಾಧದ ಬಗ್ಗೆ ಸವಿಸ್ತಾರವಾಗಿ ತಿಳಿಹೇಳಿದರು ಸೈಬರ್ ಅಪರಾಧ (Cyber Crime) ಎಂದರೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸಿ ನಡೆಸುವ ಎಲ್ಲಾ ರೀತಿಯ ಅಪರಾಧಗಳು. ಹಣಕಾಸು ವಂಚನೆ, ವೈಯಕ್ತಿಕ ಮಾಹಿತಿಗಳ ಕಳ್ಳತನ, ಇಂಟರ್ನೆಟ್ ಮೂಲಕ ಬೆದರಿಕೆ, ಮೋಸ ಮತ್ತು ಇತರ ಅಪರಾಧಗಳು ಇದರಲ್ಲಿ ಸೇರುತ್ತವೆ. ಸೈಬರ್ ಅಪರಾಧಗಳಿಂದ ರಕ್ಷಿಸಿಕೊಳ್ಳಲು, ಆನ್‌ಲೈನ್‌ನಲ್ಲಿ ಜಾಗರೂಕರಾಗಿರುವುದು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಿರುವುದು, ಮತ್ತು ಅಪರಾಧ ನಡೆದರೆ ತಕ್ಷಣವೇ ಸೈಬರ್ ಸಹಾಯವಾಣಿ 1930 ಅಥವಾ 112 ಗೆ ದೂರು ನೀಡಬೇಕೆಂದು ತಿಳಿಸುತ್ತಾ ಸೈಬರ್ ಅಪರಾಧಗಳ ಬಗ್ಗೆ , ಎಪಿಕೆ ಫೈಲ್ ಗಳ ಬಗ್ಗೆ ಹಾಗೂ ಸೈಬರ್ ಅಪರಾಧಗಳಿಂದ ರಕ್ಷಿಸಿಕೊಳ್ಳಲು ಸಲಹೆಗಳನ್ನು ನೀಡಿದರು . ಮುಖ್ಯವಾಗಿ ಸಾರ್ವಜನಿಕರಿಗೆ ಸೈಬರ್ ಕಳ್ಳರು ಹಣ ದೋಚುವ ರೀತಿಯ ಬಗ್ಗೆ ಮಾಹಿತಿ ನೀಡಬೇಕೆಂದು ಠಾಣಾಧಿಕಾರಿಯವರು ತಿಳಿಸಿದರು. ಶಿರ್ವದ ಎಲ್ಲಾ ಸಂಸ್ಥೆಗಳಿಗೆ ಸಿಸಿ ಕ್ಯಾಮೆರಾ, ಅಗ್ನಿನಂದಕ ( Fire Extinguisher) ಅಗತ್ಯ ಹಾಗೂ ಸೈಬರ್ ಕ್ರೈಂ ನ 1930 ಹಾಗೂ 112 ಇರುವ ಫಲಕವನ್ನು ಅಳವಡಿಸಬೇಕೆಂದು ತಿಳಿಸಿದರು. ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯು ಶಿರ್ವದಲ್ಲಿ ಆರು ವರ್ಷಗಳಿಂದ ಕಾರ್ಯನಿರ್ವಹಿಸಿದ್ದು, ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು .
ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಾನ್ಸನ್ ಡಿ ಆಲ್ಮೇಡಾ ರವರು ಶಿರ್ವ ಠಾಣಾಧಿಕಾರಿ ಶ್ರೀ ಮಂಜುನಾಥ ಮರಭದ , ಸೈಬರ್ ಕ್ರೈಂ ಠಾಣಾಧಿಕಾರಿ ಶ್ರೀ ಲೋಹಿತ್ ಕುಮಾರ್ ಹಾಗೂ ಹೆಡ್ ಕಾನ್ಸ್ಟೇಬಲ್ ಶ್ರೀ ಮಂಜುನಾಥ್ ಅಡಿಗ ಅವರ ಸೇವೆಯನ್ನು ಶ್ಲಾಘೀಸಿದರು. ಈ ಕಾರ್ಯಕ್ರಮದಲ್ಲಿ ಶಿರ್ವ ಶಾಖಾ ನಿರ್ದೇಶಕರಾದ ಶ್ರೀ ವಿಲ್ಸನ್ ಡಿಸೋಜ, ಕಟ್ಟಡ ಮಾಲಕರಾದ ಶ್ರೀ ಮೈಕಲ್ ಡಿಸೋಜಾ ಹಾಗೂ ಶ್ರೀಮತಿ ರೋಜಿ ಡಿಸೋಜ, ನಮ್ಮ ಸಂಘದ ಕೆಲವು ಗ್ರಾಹಕರು ಹಾಗೂ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿರ್ವ ಶಾಖಾಧಿಕಾರಿ ಶ್ರೀ ವಿಕ್ಟರ್ ಪಿಂಟೊ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ