ಯುವ ಕಾಂಗ್ರೆಸ್ ಸಮಿತಿ ಶಿರ್ವ ವತಿಯಿಂದ ಪಂಜಿಮಾರು – ಶಿರ್ವ – ಪಿಲಾರುಕಾನದ ಹದಗೆಟ್ಟ ರಸ್ತೆಯ ದುರಸ್ತಿಯ ಬಗ್ಗೆ : ಪ್ರತಿಭಟನೆ ಹಾಗೂ ರಸ್ತೆ ತಡೆ 11-09-2025 ಗುರುವಾರ ಬೆಳಿಗ್ಗೆ 10 ಗಂಟೆಗೆ
ಶಿರ್ವ ನ್ಯಾರ್ಮ ಸೇತುವೆ ಬಳಿ ಸರಿಸುಮಾರು 300 ಸಾರ್ವಜನಿಕರು ಭಾಗಿಯಾಗಿದ್ದರು. ಸಾರ್ವಜನಿಕರು ಆಕ್ರೋಶಿತರಾಗಿ ಸ್ಥಳೀಯ ಶಾಸಕರ ವಿರುದ್ಧ ಕಿಡಿ ಕಾಯ್ದರು. ತಮ್ಮ ಕಾರ್ಯಕರ್ತರ ಮನೆಗಳಿಗೆ ರಸ್ತೆ ಮಾಡುವುದನ್ನು ಬಿಟ್ಟು ಸಾರ್ವಜನಿಕರಿಗೆ ರಸ್ತೆಯನ್ನು ಮಾಡಿಕೊಡಿ ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಮೈಕಲ್ ರಮೇಶ್ ಡಿಸೋಜ ಸ್ಥಳೀಯ ಶಾಸಕರ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ಕಾಪು ಬ್ಲಾಕ್ ಅಧ್ಯಕ್ಷರಾದ ವೈ. ಸುಕುಮಾರ್ ರವರು ಮಾತನಾಡಿ ಇವತ್ತಿನ ಪ್ರತಿಭಟನೆಯ ಫಲವಾಗಿ ಬೆಳಿಗ್ಗೆ ಪಂಜಿಮಾರಿನಲ್ಲಿ ಹೊಂಡಗಳಿಗೆ ವೆಟ್ ಮಿಕ್ಸ್ ಹಾಕುವ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಆದರೆ ನಮಗೆ ಅದು ಬೇಡ ನಮಗೆ ರಸ್ತೆ ದುರಸ್ತಿ ಮಾಡಿಕೊಡಬೇಕಾಗಿ ಆಗ್ರಹಿಸಿದರು. ಮಾಜಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿಲ್ಸನ್ ರೊಡ್ರಿಗಸ್ ರವರು ಮಾತನಾಡಿ ಸ್ಥಳೀಯ ಶಾಸಕರು ಅನುದಾನವನ್ನು ತರಿಸಿ ಕೆಲಸ ಕಾರ್ಯಗಳನ್ನು ಮಾಡಬೇಕು ಅನುದಾನ ಸಿಗದಿದ್ದಲ್ಲಿ, ವಿಧಾನಸಭೆಯಲ್ಲಿ ಧರಣಿ ಕುಳಿತುಕೊಂಡು ಅನುದಾನ ತರಿಸಿ ರಸ್ತೆಯನ್ನು ಮಾಡಿಕೊಡಬೇಕಾಗಿ ತಿಳಿಸಿದರು. ಪ್ರತಿಭಟನೆಯು ತೀವ್ರಗತಿಗೆ ತಿರುಗಿದ್ದು ಪ್ರತಿಭಟನಕಾರರು ರಸ್ತೆಯನ್ನು ತಡೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ, ಸ್ಥಳಕ್ಕೆ ಪಿಡಬ್ಲ್ಯುಡಿ ಇಂಜಿನಿಯರ್ ಆಗಮಿಸಿದರೆ ಮಾತ್ರ ನಾವು ವಾಹನಗಳಿಗೆ ಅನುವು ಮಾಡಿ ಕೊಡುತ್ತೇವೆ ಎಂದರು. ಶಿರ್ವ ಪೋಲೀಸ್ ಠಾಣಾಧಿಕಾರಿಯಾಗಿದ್ದ ಶ್ರೀ ಮಂಜುನಾಥ್ ಮರ್ಬದ್ ರವರು PWD AEE ಯವರನ್ನು ಸ್ಥಳಕ್ಕೆ ಬರಹೇಳಿ, ಪ್ರತಿಭಟನಕಾರರನ್ನು ನಿಯಂತ್ರಿಸಿದರು. ಬಂದೋಬಸ್ತಿಗೆ dar striking force ನ್ನು ಬಳಸಿ, ಹಾಗೂ ಶಿರ್ವ ಠಾಣಾ ಸಿಬ್ಬಂದಿಗಳು ವಾಹನ ಸಂಚಾರವನ್ನು ಸುಗಮಗೊಳಿಸಿದರು.
ಸ್ಥಳಕ್ಕೆ ಆಗಮಿಸಿದ PWD AEE ಮಂಜುನಾಥ್ ರವರು ಪ್ರತಿಭಟನಕಾರರ ಮನವಿಯನ್ನು ಸ್ವೀಕರಿಸಿ, ಇಲಾಖೆಯಿಂದ 8 ಕೋಟಿ ರೂಪಾಯಿಯಲ್ಲಿ ಕಾಮಗಾರಿಯನ್ನು ಉಡುಪಿ ಜಿಲ್ಲಾದ್ಯಂತ ಮಾಡಿರುತ್ತೇವೆ. ಮುಖ್ಯವಾಗಿ ರಸ್ತೆಯ ಇಕ್ಕೆಲಗಳಲ್ಲಿ ಇರುವ ನೀರಿನ ಚರಂಡಿಯನ್ನು ದುರಸ್ತಿ ಮಾಡಿ ಮುಖ್ಯರಸ್ತೆಯ ಹೊಂಡಗಳನ್ನು ಒಂದು ವಾರದೊಳಗೆ ತೇಪೆಹಾಕಿ ಮುಚ್ಚಲಾಗುವುದು, ನಂತರ ಸರಕಾರದ ಅನುದಾನದಿಂದ ಅಕ್ಟೋಬರ್ ನಲ್ಲಿ ಡಾಮಾರು ಹಾಕಿ ರಸ್ತೆಯನ್ನು ದುರಸ್ತಿಪಡಿಸಲಾಗುವುದು ಎಂದು ತಿಳಿಸಿದರು.

ಅದಕ್ಕೆ ಒಪ್ಪದ ಪ್ರತಿಭಟನಕಾರರು ಇವತ್ತೇ ಅಥವಾ ನಾಳೆಯೇ ರಸ್ತೆಯನ್ನು ದುರಸ್ತಿಪಡಿಸಬೇಕೆಂದು ಪಟ್ಟು ಹಿಡಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವೈ ಸುಕುಮಾರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶ್ರೀ ಶರ್ಪುದ್ದೀನ್ ಶೇಕ್, ಶ್ರೀ ಹಸನಬ್ಬ ಶೇಕ್, ರತನ್ ಶೆಟ್ಟಿ, ರಮೇಶ್ ಬಂಗೇರ, ವಿಲ್ಸನ್ ರೊಡ್ರಿಗಸ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತಾ ವಾಗ್ಗೆ, ಶ್ರೀಮತಿ ಗ್ರೇಸಿ ಕಾರ್ಡೊಜಾ, ಗ್ಲಾಡಿಸ್ ಅಲ್ವೇಡಾ, ಜುಬೇರ್ ಅಲಿ, ಹಸನ್ ಇಬ್ರಾಹಿಂ, ಜೈನುದ್ದೀನ್, ಆಶಾ ಅಂಚನ್, ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೀರ್ತನ್ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೊಹಮದ್ ನಿಯಾಜ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗಿರೀಶ್ ಕೋಟ್ಯಾನ್, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಅಬ್ದುಲ್ ಲತೀಫ್, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಅಬ್ದುಲ್ ಅಹಾದ್, ಅರುಣ್ ಪೂಜಾರಿ, ಅಜಯ್ ಪೂಜಾರಿ ಹಾಜರಿದ್ದರು. ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೆಲ್ವಿನ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ