ಕಾರ್ಕಳ: ಪಿರ್ಯಾದುದಾರ ಪ್ರಕಾಶ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ,ಉಡುಪಿ ಇವರು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಅಂಗರಕ್ಷಕರಾಗಿದ್ದು, ಈ ದಿನ ದಿನಾಂಕ 21/08/2025 ರಂದು ಬೆಳಿಗ್ಗೆ ಇಲಾಖಾ ವಾಹನಗಳಲ್ಲಿ ತನಿಖಾಧಿಕಾರಿ ಮತ್ತು ಇತರ ಇಲಾಖಾ ಅಧಿಕಾರಿಗಳ ತಂಡದೊಂದಿಗೆ ಮೇಲಾಧಿಕಾರಿಯವರ ಆದೇಶದಂತೆ ಬ್ರಹ್ಮಾವರ ಪೊಲೀಸ್ ಠಾಣಾ ಪ್ರಕರಣದ ಆರೋಪಿ ದಸ್ತಗಿರಿ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಎಂಬಲ್ಲಿಗೆ ಹೋಗಿದ್ದು ಸದ್ರಿ ಪ್ರಕರಣದಲ್ಲಿ ಆಪಾದಿತ ಮಹೇಶ್ ಶೆಟ್ಟಿ ತಿಮರೋಡಿ ಎಂಬಾತನನ್ನು ಬೆಳಗ್ಗೆ ಸುಮಾರು 10:45 ಗಂಟೆಗೆ ವಶಕ್ಕೆ ಪಡೆದಿದ್ದು, ಈ ವೇಳೆ ಸುಮಾರು 50 ಕ್ಕೂ ಹೆಚ್ಚು ತಿಮರೋಡಿಯ ಪರ ಜನರು ಸೇರಿದ್ದು, ಆ ಸಮಯ ಆತನ ಬೆಂಬಲಿಗರಿಗೆ ಕರ್ತವ್ಯ ಅಡ್ಡಿಪಡಿಸದಂತೆ ತಿಳುವಳಿಕೆ ನೀಡಿ, ಮಹೇಶ್ ಶೆಟ್ಟಿ ತಿಮರೋಡಿಯ ಮನೆಯಿಂದ ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ನಾರಾವಿ ಮೂಲಕ ಬ್ರಹ್ಮಾವರಕ್ಕೆ ಹೊರಟಿದ್ದು, ಈ ವೇಳೆ ಅವರ ಬೆಂಬಲಿಗರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಯಾಕೆ ಬಂಧಿಸುತ್ತೀರಿ ಎಂದು, ಸುಮಾರು ವಾಹನಗಳಲ್ಲಿ ಹಿಂಬಾಲಿಸಿದ್ದು, ಅದರಲ್ಲಿ KA70-M-3048 ನಂಬ್ರದ ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ 3 ಜನ, 2-3 ಬಾರಿ ನಮ್ಮಗಳ ಇಲಾಖಾ ವಾಹನಕ್ಕೆ ಗುದ್ದುವ ರೀತಿಯಲ್ಲಿ ಬಂದಿದ್ದು, ಅವರುಗಳಿಗೆ ನಾವು ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸಿ ನಮ್ಮನ್ನು ಹಿಂಬಾಲಿಸದಂತೆ ಅಧಿಕಾರಿಗಳು ತಿಳಿಸಿ ಹೇಳುತ್ತಿದ್ದರು ಕೂಡಾ, ನಿಮಗೆ ಏನು ಮಾಡಲಿಕ್ಕೆ ಆಗುತ್ತದೆ ಪೊಲೀಸರೇ ತಿಮರೋಡಿಯನ್ನು ಏಕೆ ಬಂದಿಸುತ್ತೀರಿ, ತಿಮರೋಡಿಯನ್ನು ಇಲ್ಲಿಯೇ ಬಿಡಿ ಎಂದು ಅಧಿಕಾರಿಗಳಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದು, ಅವರಿಗೆ ತಿಳಿಸಿ ಹೇಳಿ ನಾವುಗಳು ಮುಂದೆ ಹೋಗಿದ್ದು, ಈದು, ಹೊಸ್ಮಾರು ದಾಟಿ ಮುಂದೆ ಬರುವಾಗ ಪುನಃ ನಮ್ಮ ವಾಹನದ ಹಿಂದೆ ಇದ್ದ ಬೆಂಗಾವಲು ವಾಹನಗಳನ್ನು ಓವರ್ ಟೇಕ್ ಮಾಡಿ ಅತೀವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಇಲಾಖಾ ವಾಹನ KA20-G-0669 ನೇದರ ಹಿಂಬದಿಯಿಂದ ಗುದ್ದಿಸಿದ್ದು, ಇಲಾಖಾ ವಾಹನ ಜಖಂ ಆಗಿರುತ್ತದೆ ಮತ್ತು ವಾಹನದಲ್ಲಿದ್ದ ಫಿರ್ಯಾದುದಾರರಿಗೆ ಗುದ್ದಿದ ನೋವು ಉಂಟಾಗಿರುತ್ತದೆ . ಆರೋಪಿತರಾದ 1) ಸೃಜನ್ ಎಲ್ ,2)ಹಿತೇಶ್ ,3) ಸಹನ್ ರವರ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2025 ಕಲಂ 132, 121(1), 281, 3(5) ಭಾರತೀಯ ನ್ಯಾಯ ಸಂಹಿತೆ 2023 ಮತ್ತು 3 PDLP Act ರಂತೆ ಪ್ರಕರಣ ದಾಖಲಿಸಲಾಗಿದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ