ಇಂದು ಮೈಸೂರು ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿರುವ ಪೊಲೀಸ್ ಹುತಾತ್ಮ ಸ್ಮಾರಕ ಉದ್ಯಾನವನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಶ್ರೀ ರವೀಂದ್ರ ಹೆಗ್ಗಡೆಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಲಕ್ಷ್ಮಿಕಾಂತ್ ರೆಡ್ಡಿ ಐಎಎಸ್ ರವರು ದಕ್ಷಿಣ ವಲಯದ ಡಿಐಜಿಪಿ ರವರಾದ ಡಾ.ಎಂ ಬಿ ಬೋರಲಿಂಗಯ್ಯ ಐಪಿಎಸ್ ರವರು ನಗರ ಪೊಲೀಸ್ ಆಯುಕ್ತರದ ಶ್ರೀಮತಿ ಸೀಮಾ ಲಾಟ್ಕರ್ ಐಪಿಎಸ್ ರವರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ ಎನ್ ಐಪಿಎಸ್ ರವರು ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.