ಈ ದಿನ ಸಂಜೆ ದಸರಾ ಹಬ್ಬದ ಅಂಗವಾಗಿ ಲಲಿತ ಮಹಲ್ ಅರಮನೆಯಲ್ಲಿ ಉಳಿದುಕೊಳ್ಳುವ ವಿ.ಐ.ಪಿ. ಗಣ್ಯರುಗಳ ಭದ್ರತೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ಶ್ರೀ ಲಕ್ಷ್ಮೀಕಾಂತ್ ರೆಡ್ಡಿ IAS, ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS, ಉಪಪೊಲೀಸ್ ಆಯುಕ್ತರುಗಳಾದ ಶ್ರೀ ಮುತ್ತುರಾಜು ಎಂ IPS, ಕಾನೂನು & ಸುವ್ಯವಸ್ಥೆ, ಶ್ರೀಮತಿ S ಜಾಹ್ನವಿ IPS, ಅಪರಾಧ & ಸಂಚಾರ & ಇತರೆ ಅಧಿಕಾರಿಗಳು ಬಂದೋಬಸ್ತ್ ಬಗ್ಗೆ ಪರಿಶೀಲಿಸಿದರು.