ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇಂದು ಮಾಧ್ಯಮಗೋಷ್ಠಿ ನಡೆಸಿ ಹಲಸೂರು ಪೊಲೀಸ್ ಠಾಣೆಯ ಅಧಿಕಾರಿಗಳು ವಂಚನೆ ಪ್ರಕರಣಕ್ಕೆ ಸಂಬಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದರು. ಈತ ಚಿನ್ನದ ಮಳಿಗೆ ಮಾಲೀಕರಿಗೆ ಚಿನ್ನ ಪಾಲೀಶ್ ಮಾಡುವುದಾಗಿ ಹೇಳಿ ನಂತರ ಚಿನ್ನದ ಸಮೇತ ಪಲಾಯನ ಮಾಡುತ್ತಿದ್ದು, ಈತನ ಬಂಧನದಿಂದ 384 ಗ್ರಾಂ ಚಿನ್ನ ಹಾಗೂ 10,99,779 ನಗದು ಸೇರಿ ಒಟ್ಟು 38 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಲಸೂರುಗೇಟ್ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ನಗರತ್‌ಪೇಟೆಯಲ್ಲಿ ಪರ‍್ಯಾದುದಾರರು ಚಿನ್ನದ ಅಂಗಡಿಯನ್ನು ಇಟ್ಟುಕೊಂಡಿರುತ್ತಾರೆ. ದಿನಾಂಕ:೧೯/೦೮/೨೦೨೪ ರಂದು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪರ‍್ಯಾದುದಾರರು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪರ‍್ಯಾದುದಾರರ ಅಂಗಡಿಯಲ್ಲಿ ಈ ಹಿಂದಿನಿAದ ಓರ್ವ ವ್ಯಕ್ತಿಯು ಚಿನ್ನದ ವಡವೆಗಳನ್ನು ಪರ‍್ಯಾದುದಾರರ ಅಂಗಡಿಯಿAದ ತೆಗೆದುಕೊಂಡು ಹೋಗಿ, ಚಿನ್ನದ ಒಡವೆಗಳಿಗೆ ಪಾಲಿಶ್ ಮಾಡಿ, ಹರಳುಗಳನ್ನು ಕೂರಿಸಿ ಆಭರಣಗಳನ್ನು ಪೂರ್ಣಗೊಳಿಸಿ ನೀಡುತ್ತಿದ್ದನು.
ಪರ‍್ಯಾದುದಾರರು ದಿನಾಂಕ:೩೦/೦೫/೨೦೨೪ ರಿಂದ ಪಾಲಿಶ್ ಹಾಗೂ ಹರಳುಗಳನ್ನು ಕೂರಿಸುವ ವ್ಯಕ್ತಿಗೆ ಒಂದು ತಿಂಗಳ ಅವದಿಯಲ್ಲಿ ಒಟ್ಟು ೧ ಕೆ.ಜಿ ೨೭೭ ಗ್ರಾಂ ಚಿನ್ನದ ಆಭರಣಗಳನ್ನು ನೀಡಿದ್ದು, ಆತನು ದಿನಾಂಕ:೧೮/೦೮/೨೦೨೪ ರ ವರೆಗೆ ಯಾವುದೇ ಆಭರಣಗಳನ್ನು ಹಿಂದಿರುಗಿಸದೆ ಹಾಗೂ ಆತನು ಹೊಂದಿದ್ದ ನಗರತ್‌ಪೇಟೆಯಲ್ಲಿನ ಅಂಗಡಿಯನ್ನು ಸಹ ಖಾಲಿ ಮಾಡಿಕೊಂಡು ಹೋಗಿರುತ್ತಾನೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಾಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:೦೩/೦೯/೨೦೨೪ರAದು ಓರ್ವ ವ್ಯಕ್ತಿಯನ್ನು ಕಲಿಯಾಸ್‌ಗ್ರಾಮ, ಅಸಿಂದ ತಾಲ್ಲೊಕ್, ಬಿಲ್ವಾರ ಜಿಲ್ಲೆ, ರಾಜಸ್ಥಾನದ ಆತನ ವಾಸದ ಮನೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಚಿನ್ನದ ಆಭರಣಗಳನ್ನು ವಂಚಿಸಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ.
ದಿನಾAಕ:೦೫/೦೯/೨೦೨೪ ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ೧೪ ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿ, ಆರೋಪಿಯು ಫರ‍್ಯಾದುದಾರರ ಚಿನ್ನದ ಅಂಗಡಿಯಿAದ ಪಡೆದಿದ್ದ ಚಿನ್ನದ ವಡವೆಗಳನ್ನು ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಮಾರ್ಪಡಿಸಿ, ಬೆಂಗಳೂರು ನಗರದ ವಿವಿಧ ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿ, ಹಣವನ್ನು ಪಡೆಯದೆ ರಸೀದಿಯನ್ನು ಪಡೆದುಕೊಂಡು ಊರಿಗೆ ಹೋಗಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:೦೫/೦೯/೨೦೨೪ ರಿಂದ ೧೮/೦೯/೨೦೨೪ರ ಅವದಿಯಲ್ಲಿ ಆರೋಪಿಯಿಂದ ಚಿನ್ನದ ಗಟ್ಟಿಯನ್ನು ಸ್ವೀಕರಿಸಿದ್ದ ವಿವಿಧ ಜ್ಯೂವೆಲರಿ ಶಾಪ್‌ನ ಮಾಲೀಕರಿಂದ ೩೮೪ ಗ್ರಾಂ ಚಿನ್ನದ ಗಟ್ಟಿಯನ್ನು ಹಾಗೂ ₹ ೧೦,೯೯,೭೭೦/- ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಒಟ್ಟು ಮೌಲ್ಯ ₹ ೩೮,೦೦,೦೦೦/-(ಮೂವತ್ತೆಂಟು ಲಕ್ಷ ರೂಪಾಯಿ)
ದಿನಾಂಕ:೧೮/೦೯/೨೦೨೪ ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ಕೇಂದ್ರ ವಿಭಾಗ ರವರಾದ ಶ್ರೀ. ಶೇಖರ್ ಸಿ. ಐ.ಪಿ.ಎಸ್ ಮತ್ತು ಸಹಾಯಕ ಪೊಲೀಸ್ ಆಯುಕ್ತರು ಹಲಸೂರುಗೇಟ್ ಉಪ ವಿಭಾಗ ರವರಾದ ಶ್ರೀ.ಶಿವಾನಂದ ಚಲವಾದಿ ರವರ ಮಾರ್ಗದರ್ಶನದಲ್ಲಿ ಹಲಸೂರುಗೇಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಹನಮಂತ ಕೆ ಭಜಂತ್ರಿ ರವರ ಅಧಿಕಾರಿ/ಸಿಬ್ಬಂದಿರವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.