ಹುಳಿಮಾವು ಪೊಲೀಸ್ ಠಾಣಾ ಸರಹದ್ದಿನ ಬನ್ನೇರುಘಟ್ಟು ಮುಖ್ಯರಸ್ತೆಯ ಎಲ್ಲೇನಹಳ್ಳಿಯಲ್ಲಿ ವಾಸವಿರುವ ಫಿರಾದುದಾರರು ದಿನಾಂಕ:01/08/2024 ರಂದು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ದಿನಾಂಕ:30/07/2024 ರಂದು ಬೆಳಿಗ್ಗೆ ತಮ್ಮ ದ್ವಿ-ಚಕ್ರ ವಾಹನವನ್ನು ಮನೆಯ ಮುಂದಿನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ, ಸ್ವಂತ ಊರಾದ
ತಮಿಳುನಾಡಿನ ತಿಡಿವನಂಗೆ ಹೋಗಿರುತ್ತಾರೆ. ದಿನಾಂಕ:31/07/2024 ರಂದು ಸಂಜೆ ವಾಪಸ್ ಬಂದು ತಮ್ಮ ದ್ವಿ-ಚಕ್ರ ವಾಹನವನ್ನು ನೋಡಲಾಗಿ ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:26/08/2024 ರಂದು ಹುಳಿಮಾವು ಕೆರೆಯ ಬಳಿ ಇಬ್ಬರು ವ್ಯಕ್ತಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದ ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ದ್ವಿ-ಚಕ ವಾಹನವನ್ನು ಕಳವು ಮಾಡಿರುವುದಾಗಿ ತಪ್‌ಪಿಕೊಂಡಿರುತ್ತಾರೆ.
ದಿನಾಂಕ:27/08/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 5 ದಿನಗಳ ಕಾಲ ಪೊಲೀಸ್ ಅಭಿರಕೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕೆಗೆ ಪಡೆದ ಇಬ್ಬರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ, ಮನೆಗಳ್ಳತನ, ದ್ವಿ-ಚಕ್ರ ಮತ್ತು ಕಾರುಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.
ದಿನಾಂಕ:29/08/2024 ರಂದು ಇಂದಿರಾನಗರದ ಗೋಲ್ಡ್ ಫೈನಾನ್‌ನಲ್ಲಿ ಅಡವಿಟ್ಟಿದ್ದ 30.04 ಗ್ರಾಂ ಚಿನ್ನಾಭರಣವನ್ನು ಮತ್ತು ದೊಡ್ಡ ಕಮ್ಮನಹಳ್ಳಿಯ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ 2 ಕಾರುಗಳು ಹಾಗೂ 2 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ಎರಡು ಕಾರುಗಳನ್ನು ಪರಿಶೀಲಿಸಲಾಗಿ, ಒಂದು ಕಾರಿನಲ್ಲಿ ಇಟ್ಟಿದ್ದ 30 ಗ್ರಾಂ ಬೆಳ್ಳಿಯ ನಾಣ್ಯಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಬ್ಬಿಣದ ರಾಡ್ ಹಾಗೂ ನಗದ್ದು 32,840/- ವಶಕ್ಕೆ ಪಡೆಯಲಾಯಿತು.
ದಿನಾಂಕ:30/08/2024 ರಂದು ಇಂದಿರಾನಗರದ ಜ್ಯೂವೆಲರಿ ಅಂಗಡಿಯಲ್ಲಿಟ್ಟಿದ್ದ 40 ಚಿನ್ನಾಭರಣ ಮತ್ತು ಮಳವಳ್ಳಿಯ ಎಂ.ಕೆ.ದೊಡ್ಡಿಯ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ 2 ಕಾರುಗಳು ಹಾಗೂ 1 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು.
ಒಟ್ಟಾರೆ ಈ ಇಬ್ಬರು ಆರೋಪಿಗಳಿಂದ 70 ಗ್ರಾಂ ಚಿನ್ನಾಭರಣ, 30 ಗ್ರಾಂ ಬೆಳ್ಳಿಯ ನಾಣ್ಯಗಳು, 4 ಕಾರುಗಳು, 4 ದ್ವಿ-ಚಕ್ರ ವಾಹನಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಬ್ಬಿಣದ ರಾಡ್, ನಗದು 32,840 …. ಮತ್ತು 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 35,00,000/- (ಮೂವತ್ತೈದು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ 1) ಹುಳಿಮಾವು ಪೊಲೀಸ್ ಠಾಣೆಯ-02 ಮನೆ ಕಳವು ಪ್ರಕರಣ ಮತ್ತು 01-ದ್ವಿ-ಚಕ್ರ ವಾಹನ ಕಳವು ಪ್ರಕರಣ 2) ಬನಶಂಕರಿ ಪೊಲೀಸ್ ಠಾಣೆಯ-01 ಕಾರು ಕಳವು ಪ್ರಕರಣ 3) ಜಯನಗರ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ 4) ಸರ್ಜಾಪುರ ಪೊಲೀಸ್ ಠಾಣೆಯ-01 ಕಾರು ಕಳವು ಪ್ರಕರಣ ಹಾಗೂ 01-ಮನೆ ಕಳವು ಪ್ರಕರಣ 5) ಸೂರ್ಯನಗರ ಪೊಲೀಸ್ ಠಾಣೆಯ-01 ಕಾರು ಕಳವು ಪ್ರಕರಣ ಹಾಗೂ 01-ಮನೆ ಕಳವು ಪ್ರಕರಣ 6)ಮಡಿವಾಳ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ 7)ಮಳವಳ್ಳಿ ಪೊಲೀಸ್ ಠಾಣೆಯ-01 ಮನೆ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆಯಾಗಿರುತ್ತವೆ. 1 ಕಾರು ಹಾಗೂ 1 ದ್ವಿ-ಚಕ್ರ ವಾಹನದ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ.
ದಿನಾಂಕ:31/08/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಬಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಆಗೇಯ ವಿಭಾಗದ ಉಪ ಪೊಲೀಸ್ ಆಯುಕ್ತರು ಶ್ರೀಮತಿ.ಸಾರಾ ಫಾತಿಮ, ಐ.ಪಿ.ಎಸ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಶ್ರೀ.ಮಂಜುನಾಥ್ ಬಿ.ಆರ್ ರವರ ಮಾರ್ಗದರ್ಶನದಲ್ಲಿ ಹುಳಿಮಾವು ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕರ್ ಶ್ರೀ.ಕುಮಾರ್ ಸ್ವಾಮಿ.ಬಿ.ಜಿ ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.