ಅಂಗನವಾಡಿಗೆ ಹೋಗುವ 5 ವರ್ಷದ ಪುಟ್ಟ ಬಾಲಕಿ ಮೇಲೆ ದುಷ್ಕರ್ಮಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ನಂತರ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.. ಕೊಲೆ ಮಾಡಿದ ಮೇಲೆ ಆರೋಪಿ ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದಾನೆ..
ಅಂಗನವಾಡಿಗೆ ಹೋಗುವ ಬಾಲಕಿಗೆ ಜ್ವರ ಬಂದಿತ್ತು.. ಹೀಗಾಗಿ ಆಕೆ ಮನೆಯಲ್ಲೇ ಮಲಗಿದ್ದಳು.. ಬಾಲಕಿಯ ತಾಯಿ ಜಮೀನು ಕೆಲಸಕ್ಕೆ ಹೋಗಿದ್ದಳು.. ಮನೆಯಲ್ಲಿ ಬಾಲಕಿ ಒಬ್ಬಳೇ ಮಲಗಿದ್ದನ್ನು ದುಷ್ಕರ್ಮಿ ನೋಡಿದ್ದಾನೆ.. ಆಕೆಗೆ ಜ್ವರ ಬರುತ್ತಿದ್ದರೂ ಬಿಡದೇ ಕಾಮುಕ ಆಕೆಯ ಮೇಲರಗಿದ್ದಾನೆ.. ಆಕೆ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.. ಆದ್ರೆ ಬಾಲಕಿ ಪ್ರತಿರೋಧ ತೋರಿದ್ದಾಳೆ.. ಇದರಿಂದಾಗಿ ಆರೋಪಿ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.. ನಂತರ ದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ..
ಸಂಜೆ ತಾಯಿ ಮನೆಗೆ ಬಂದಾಗ ಮಗಳು ಕೊಲೆಯಾಗಿರುವುದು ಗೊತ್ತಾಗಿದೆ.. ಕೂಡಲೇ ಅಜ್ಜಂಪುರ ಪೊಲೀಸರಿಗೆ ದೂರು ನೀಡಲಾಗಿದೆ.. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ… ಆದ್ರೆ ಯಾರು ಈ ಕೆಲಸ ಮಾಡಿದ್ದಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ.