ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ, ದಿನಾಂಕ:15/09/2015 ರಂದು ದಾಖಲಾಗಿದ್ದ ಅಪರಾಧ ಪ್ರಕರಣದಲ್ಲಿನ ಆರೋಪಿತೆಯ ವಿರುದ್ಧ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ನಿವೇದಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಆ ಪ್ರಕರಣದಲ್ಲಿ ಆರೋಪಿತೆಯು ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುತ್ತಾಳೆ. ಮಾನ್ಯ ನ್ಯಾಯಾಲಯಯವು ಆರೋಪಿತೆಯ ವಿರುದ್ದ ಎಲ್.ಪಿ.ಆರ್. ಪ್ರಕರಣವೆಂದು ಪರಿಗಣಿಸಿ ಆರೋಪಿತೆಯನ್ನು ಪತ್ತೆ ಮಾಡುವಂತೆ ಆದೇಶಿಸಿರುತ್ತದೆ.
ಪ್ರಕಣದಲ್ಲಿನ ಆರೋಪಿತೆಯನ್ನು ಪತ್ತೆ ಮಾಡುವ ಸಂಬಂಧ, ಸುಬ್ರಮಣ್ಯಪುರ ಪೊಲೀಸ್ ಇನ್ಸ್‌ಪೆಕ್ಟರ್ ರವರು ಒಂದು ವಿಶೇಷ ತಂಡವನ್ನು ರಚಿಸಿದ್ದು, ಆ ತಂಡದಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾಂತ್ರಿಕ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ, ಬಾತ್ಮೀದಾರರನ್ನು ಭೇಟಿ ಮಾಡಿ ಬಾತ್ಮೀದಾರರ ಮಾಹಿತಿಯ ಮೇರೆಗೆ, ದಿನಾಂಕ:06.06.2024 ರಂದು ಆರೋಪಿತೆಯನ್ನು ಉತ್ತರ ಕನ್ನಡ ಜಿಲ್ಲೆ. ಕುಮುಟಾ ತಾಲ್ಲೂಕ್, ಬಂಡಿವಾಳ ಗ್ರಾಮದಲ್ಲಿ ವಾಸವಿದ್ದ ಮನೆಯಿಂದ ವಶಕ್ಕೆ ಪಡೆದು ದಿನಾಂಕ:07/06/2024 ರಂದು ಠಾಣೆಗೆ ಕರೆತಂದು, ಆರೋಪಿತೆಯನ್ನು ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಭರಮಪ್ಪ ಜಗಲಾಸ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ- ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಗಿರೀಶ್.ಎಸ್.ಬಿ ರವರ ನೇತೃತ್ವದಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಆರೋಪಿತೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.