ಗಿರಿನಗರ ಪೊಲೀಸ್ ಠಾಣೆ ಓರ್ವ ರೌಡಿ ಶೀಟರ್ ಪ್ರಕರಣವೊಂದರಲ್ಲಿ ಅರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ….ಸುಮಾರು 6 ತಿಂಗಳಿನಿಂದ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಮಾನ್ಯ ನ್ಯಾಯಾಲಯವು ವಾರೆಂಟ್ ಹೊರಡಿಸಿರುತ್ತದೆ. ಈ ರೌಡಿ ವ್ಯಕ್ತಿಯನ್ನು ಗಿರಿನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಆತನನ್ನು ದಿನಾಂಕ:02-05-2024 ರಂದು ಕನಕಪುರ ತಾಲೂಕು, ದೊಡ್ಡ ಆಲನಹಳ್ಳಿ ಗ್ರಾಮದಲ್ಲಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಕಾರ್ಯಪ್ರವೃತ್ತರಾಗಿ ಆತನನ್ನು ಅದೇ ದಿನ ವಶಕ್ಕೆ ಪಡೆದುಕೊಳ್ಳಲಾಗಿದೆ. ನಂತರ.. ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಈ ಪತ್ತೆ ಕಾರ್ಯವನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ, ಶ್ರೀ.ಲೋಕೇಶ್ ಭರಮಪ್ಪ ಜಗಲಾಸ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ವಿ.ವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಸಾಮಿದ್ ಬಾಷಾ ರವರ ಮಾರ್ಗದರ್ಶನದಲ್ಲಿ, ಗಿರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಪೆಕ ಹಾಗೂ ಅಧಿಕಾರಿ/ಸಿಬ್ಬಂದಿ ಯವರ ಯಶಸ್ವಿಗೊಳಿಸಿರುತ್ತಾರೆ.