ಹೈದ್ರಾಬಾದ್ ನಿಂದ ಮುಂಬೈಗೆ ಚಿನ್ನಾಭರಣದ ವ್ಯಾಪಾರಿ ಯುವಕನಿಗೆ ಚಿನ್ನಾಭರಣ ತರಲು ಕಳುಹಿಸಿರುತ್ತಾನೆ ಈ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಖದೀಮರು ಪೊಲೀಸ್ ಯ್ಯೂನಿಫಾರ್ಮ್ ನಲ್ಲಿ ಬಂದು ದಾಖಲೆ ಇಲ್ಲದೇ ಇಷ್ಟೊಂದು ಹಣ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿಯಾ ಎಂದು ಯುವಕನಿಗೆ ಬೆದರಿಸಿ ಹಣ ದೋಚಿರುವಂತ ಪ್ರಕರಣವನ್ನ ಕೇವಲ 72 ಗಂಟೆಯಲ್ಲಿ ಪೊಲೀಸರು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ
ಬಂಧಿತ ಆರೋಪಿಗಳಿಂದ ಮೊಬೈಲ್ ಫೋನ್ಗಳು, ವಿದೇಶಿ ಕರೇನ್ಸಿ ವಶಕ್ಕೆ ಪಡೆಯಲಾಗಿದೆ,. ಓರ್ವ ಆರೋಪಿಯ ಪತ್ನಿ ಪೊಲೀಸ್ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಯ್ಯೂನಿಫಾರ್ಮ್ ಬಗ್ಗೆ ಮಾಹಿತಿ ಹೊಂದಿದ್ದ ಆರೋಪಿ 2 ಜೊತೆ ಯ್ಯೂನಿಫಾರ್ಮ್ ತರಿಸಿಕೊಂಡಿದ್ದ
ಆರೋಪಿಗಳು 2 ವಾಕಿಟಾಕಿ ಕೂಡ ಹೊಂದಿದ್ದರು,. ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳಲ್ಲಿ ಮೂವರನ್ನ ಬಂಧಿಸಲಾಗಿದೆ ಓರ್ವ ಆರೋಪಿ ಪರಾರಿಯಾಗಿದ್ದು ಶೋಧಕಾರ್ಯ ನಡೆಯುತ್ತಿದೆ ಎಸ್ಪಿ ಮಾಹಿತಿ ನೀಡಿದಾರೆ
ಇನ್ನು ಜಿಲ್ಲೆಯ ಬೀದರ್, ಹುಮನಾಬಾದ್, ಭಾಲ್ಕಿ ಬಸವಕಲ್ಯಾಣನ 16 ಪೊಲೀಸ್ ಠಾಣೆಗಳಲ್ಲಿ ದಾಖಲಾದ 31 ಪ್ರಕರಣಗಳನ್ನ ಪೊಲೀಸರು ಭೇದಿಸಿ ಒಟ್ಟು 67 ಲಕ್ಷದ 29 ಸಾವಿರದ 8 ನೂರು ರೂಪಾಯಿ ಬೆಲೆಯುಳ್ಳ ಸ್ವತ್ತನ್ನು ಜಪ್ತಿ ಮಾಡಿ, 32 ಜನ ಆರೋಪಿಗಳನ್ನ ಬಂಧಿಸಿದಾರೆ,. ಇದರಲ್ಲಿ ಪ್ರಮುಖವಾಗಿ 25 ಲಕ್ಷಕ್ಕೂ ಅಧಿಕ ಮೌಲ್ಯದ ರೈತರ ಜಾನುವಾರುಗಳು ಎಮ್ಮೆ, ಎತ್ತು, ಆಕಳು ಕಳ್ಳತನ ಮಾಡಿದ ಖದೀಮರು, ಅಮೆರಿಕನ್ ಡಾಲರ್, ಬೈಕ್ ಕಳ್ಳರು, ತಾಮ್ರದ ಪಾತ್ರೆಗಳು, ಮೊಬೈಲ್ ಕಳ್ಳತನ ಸೇರಿದಂತೆ ವಿವಿಧ ಕಳ್ಳತನ ಪ್ರಕರಣಗಳು ಪೊಲೀಸರು ಭೇದಿಸಿದಾರೆ,. ಎಲ್ಲಾ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು
ವರದಿ :- ಸಿದ್ದು ಪಟ್ಟೇದಾರ