ಬೆಂಗಳೂರು ನಗರದ ಕೆ.ಆರ್ ಪುರಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ:24.01.2024 ರಂದು ಪಿರಾದುದಾರರ ಮನೆ ಮುಂದೆ ನಿಲ್ಲಿಸಿದ್ದ ದ್ವಿ-ಚಕ್ರ ವಾಹವನ್ನು ಯಾರೋ ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ದೂರನ್ನು ನೀಡಿದ ಮೇರೆಗೆ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತಾರೆ.
ತನಿಖೆ ಕೈಗೊಂಡ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಅವರುಗಳನ್ನು ವಿಚಾರಣೆಗೊಳಪಡಿಸಿದಾಗ ಅವರಿಂದ 8,00,000/- (ಎಂಟು ಲಕ್ಷ ರೂಪಾಯಿ) ಬೆಲೆ ಬಾಳುವ 02-ಪ್ಯಾಶನ್ ಪ್ರೋ, 10-ಹಿರೋ ಸ್ಪೆಂಡರ್, 01- ಬಜಾಜ್ ಸಿಟಿ-100 ಸೇರಿದಂತೆ ಒಟ್ಟು 13 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ವ್ಯಕ್ತಿಯು ತಲೆಮರೆಸಿಕೊಂಡಿರುತ್ತಾನೆ. ತನಿಖೆ ಮುಂದುವರೆದಿದೆ.
ವಶಪಡಿಸಕೊಂಡ ವಾಹನಗಳ ಪೈಕಿ ಕೆ.ಆರ್ ಪುರಂ ಪ್ರೊ.ಠಾಣೆ-01 ದ್ವಿ-ಚಕ್ರ ವಾಹನ ಕಳುವು ಪ್ರಕರಣ, ಕೋಲಾರ ಟೌನ್ ಮೊ.ಠಾಣೆಯ-02 ದ್ವಿ-ಚಕ್ರ ವಾಹನ ಕಳುವು ಪ್ರಕರಣ ಹಾಗೂ ಹೂಸಕೋಟೆ ಮೊ.ಠಾಣೆಯ- 03 ದ್ವಿ-ಚಕ್ರ ವಾಹನ ಕಳುವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಶಿವಕುಮಾರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀಮತಿ, ಕವಿತಾ.ಎಂ.ಸಿ, ಸಹಾಯಕ ಪೊಲೀಸ್ ಆಯುಕ್ತರು, ವೈಟ್ ಫೀಲ್ಡ್ ಉಪ ವಿಭಾಗ ರವರ ನೇತೃತ್ವದಲ್ಲಿ, ಕೆ.ಆರ್. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.