ಕಾರು ಮತ್ತು ದ್ವಿಚಕ್ರ ವಾಹನ ಕಳವು ಮಾಡುತಿದ್ದ ಮೂವರು ವ್ಯಕ್ತಿಗಳ ವರ, 5 ಕಾರು ಮತ್ತು 2 ದ್ವಿಚಕ್ರ ವಾಹನಗಳ ವಶ, ಮೌಲ್ಯ 10.65 ಲಕ್ಷ.

ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಹೆಚ್ಚಾಗಿ ದಾಖಲಾಗಿದ್ದವು. ಈ ಪ್ರಕರಣಗಳನ್ನು ಪತ್ತೆ ಹಚ್ಚಲು, ಬೆಂಗಳೂರು ನಗರ ಆತ್ಮೀಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಸಿ.ಕೆ ಬಾಬಾ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಒಂದು ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಈ ತಂಡವು ದಾಖಲಾದ ಪ್ರಕರಣಗಳ ವಿವರಗಳನ್ನು ಪಡೆದು ಹಾಗೂ ಹಲವಾರು ಸಿ.ಸಿ ಟಿವಿ ಕ್ಯಾಮಾರದ ವಿಡಿಯೋ ದೃಶ್ಯಾವಾಳಿಗಳನ್ನು ವೀಕ್ಷಿಸಿ, ತಾಂತ್ರಿಕ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಮತ್ತು ಬಾತ್ಮೀದಾರರಿಂದಲೂ ಸಹ ಮಾಹಿತಿಯನ್ನು ಸಂಗ್ರಹಿಸಿ, ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರತ್ತಾರೆ.
ವಶಕ್ಕೆ ಪಡೆದ ಮೂರು ವ್ಯಕ್ತಿಗಳನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ, ಅವರುಗಳು ನೀಡಿದ ಮಾಹಿತಿ ಮೇರೆಗೆ ಕೋರಮಂಗಲ ಠಾಣೆಯ 1 ಕಾರು ಕಳವು ಪ್ರಕರಣ ಮತ್ತು ಕಳುವಿಗೆ ಪ್ರಯತ್ನ ಪ್ರಕರಣ, ರಾಜರಾಜೇಶ್ವರಿ ಠಾಣೆಯ 01 ಕಾರು ಕಳುವು ಪ್ರಕರಣ, ಜಯನಗರ ಠಾಣೆಯ 01 ಕಾರು ಕಳವು ಪ್ರಕರಣ, ಹನುಮಂತನಗರ ಠಾಣೆಯ 01 ಕಾರು ಕಳವು ಪ್ರಕರಣ, ಸುಬ್ರಮಣ್ಯನಗರ ಠಾಣೆಯ 01 ಕಾರು ಕಳವು ಪ್ರಕರಣ, ಬನಶಂಕರಿ ಮತ್ತು ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ಒಂದೊಂದು ದ್ವಿಚಕ್ರ ವಾಹನ ಕಳವು ಪ್ರಕರಣ ಒಟ್ಟು 8 ಪ್ರಕರಣಗಳು ಪತ್ತೆಯಾಗಿರುತ್ತದೆ. (ಐದು ಕಾರು ಪ್ರಕರಣಗಳು, ಎರಡು ದ್ವಿಚಕ್ರ ವಾಹನ ಪ್ರಕರಣಗಳು ಮತ್ತು ಒಂದು ಕಳುವಿಗೆ ಪ್ರಯತ್ನ) ಇವುಗಳ ಒಟ್ಟು ಮೌಲ್ಯ 10,65,000( ಹತ್ತು ಲಕ್ಷದ ಆರವತ್ತೈದು ಸಾವಿರ ರೂಪಾಯಿಗಳು)
ಈ ಮೇಲ್ಕಂಡ ಕಾರ್ಯಚರಣೆಯನ್ನು ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ.ಕೆ.ಸಿ.ಲಕ್ಷ್ಮೀನಾರಾಯಣ ರವರ ನೇತೃತ್ವದಲ್ಲಿ, ಕೋರಮಂಗಲ ಪೊಲೀಸ್ ಠಾಣೆಯ ಹಿಂದಿನ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಡಿ.ಎನ್ ನಟರಾಜ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Leave a Reply

Your email address will not be published. Required fields are marked *