ಅಕ್ರಮ ಕುದುರೆ ರೇಸ್ ಬೆಟಿಂಗ್ ಸಾಲ್ಗಳ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ. 60 ವ್ಯಕ್ತಿಗಳು, 55 ಮೊಬೈಲ್ಗಳು ಮತ್ತು Rs. 3,45,78,140 /- ಹಣ ವಶ.
ದಿನಾಂಕ:12.01.2024 ರಂದು ಹೈಗ್ರಾಂಡ್ ಪೊಲೀಸ್ ಠಾಣಾ ಸರಹದ್ದಿನ ಬೆಂಗಳೂರು ಟರ್ಫ್ ಆವರಣದಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ, ಕೆಲವು ವ್ಯಕ್ತಿಗಳು ಟರ್ಫ್ ಕ್ಲಬ್ ಪರವಾಗಿರುವ ಲೀಗಲ್ ಬುಕ್ಕಿಗಳೆಂದು ಹೇಳಿಕೊಂಡು ಸಾರ್ವಜನಿಕರು/ಪಂಟರುಗಳಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡಿರುತ್ತಾರೆ. ಈ ರೀತಿ ಅಕ್ರಮ ರೇಸ್ ಬೆಟ್ಟಿಂಗ್ ಎಂಬ ಜೂಜಾಟ ನಡೆಸುತ್ತಿರುವುದು ಮತ್ತು ಕೆಲವು ಪರವಾನಗಿ ಪಡೆದ ಏಜೆಂಟ್ಗಳು ಸರ್ಕಾರದ ಆದೇಶಗಳನ್ನು ಸ್ಟಾಲ್ಗಳಲ್ಲಿ ಪ್ರಕಟಿಸದೇ, ಸರಿಯಾದ ಲೆಕ್ಕ ನಿರ್ವಹಣೆ ಮಾಡದೇ, ಗಿರಾಕಿಗಳಿಂದ ಪಡೆದುಕೊಂಡ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡದೇ, ಅನಧಿಕೃತ ರೇಸ್, ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ತೆರಿಗೆ ವಂಚಿಸಿ ಮೋಸ ಮಾಡುತ್ತಿರುತ್ತಾರೆ. ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ (ಸಿ.ಸಿ.ಬಿ) ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ದಾಳಿ ನಡೆಸಿ, ಅಕ್ರಮ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಒಟ್ಟು 66 ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ 55 ಮೊಬೈಲ್ಗಳು, ಇತರೆ ದಾಖಲಾತಿಗಳು ಹಾಗೂ Rs. 34578,140 /- (ಮೂರು ಕೋಟಿ ನಲವತ್ತೈದು ಲಕ್ಷದ ಎಪ್ಪತೆಂಟು ಸಾವಿರದ ನೂರ ನಲವತ್ತು ) ಹಣ ವಶಕ್ಕೆ ಪಡೆದುಕೊಂಡಿರುತ್ತಾರೆ.
.
ಈ ಕಾರ್ಯಾಚರಣೆಯಲ್ಲಿ 09 ವ್ಯಕ್ತಿಗಳು ತಲೆಮರೆಸಿಕೊಂಡಿರುತ್ತಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಮುಂದುವರೆಸಿರುತ್ತದೆ.
ಈ ಕುರಿತು ಹೆಗೌಂಡ್