ಹಸಿ ಅಡಿಕೆಯನ್ನು ಕಳ್ಳತನ ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿರುತ್ತಾರೆ.
ದಿನಾಂಕ:
16-02-2021ರಂದುವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಅಮ್ಮತ್ತಿ ಗ್ರಾಮದಲ್ಲಿ ಗಸ್ತು ಕರ್ತವ್ಯ ಮಾಡುತ್ತಿರುವಾಗ ಕೆಎ-53-ಎಂ-2923 ರ ಕಾರನ್ನು ಪರಿಶೀಲನೆ ಮಾಡಿದಾಗ ಆರೋಪಿಗಳಾದ 1) ಶರಣು ತಂದೆ ಸಿದ್ದ, ದೇವಿಕಾಡು ಎಸ್ಟೇಟ್ ಸಿದ್ದಾಪುರ. 2) ಗೋಪಾಲಕೃಷ್ಣ ತಂದೆ ಪೌತಿ ಮುತ್ತ, ಕಣ್ಣಂಗಾಲ ಗ್ರಾಮ, 3) ರಾಜೇಶ ತಂದೆ ಪೌತಿ ಮುತ್ತ, ಕಣ್ಣಂಗಾಲ ಎಂಬುವವರು ಸಿದ್ದಾಪುರ ಗ್ರಾಮದ ದೇವಿಕಾಡು ಎಸ್ಟೇಟ್ ನಿಂದ ಹಸಿ ಅಡಿಕೆಯನ್ನುಕಳವು ಮಾಡಿ ಮಾರಾಟ ಮಾಡಲು ಕಾರಿನಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಆರೋಪಿಗಳನ್ನು ವಶಕ್ಕೆ ಪಡೆದು ಆನಂದಪುರ ಎಸ್ಟೇಟ್ ನಿಂದ ಕಳವು ಮಾಡಿ ಮಾರಾಟ ಮಾಡಿದ್ದ ಅಡಿಕೆ ಸಹಿತ ಒಟ್ಟು ₹. 1,50,000 ಮೌಲ್ಯದ ಹಸಿ ಅಡಿಕೆ ಹಾಗು ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣವನ್ನು ವಿರಾಜಪೇಟೆ ಉಪವಿಭಾಗ ಡಿವೈ.ಎಸ್.ಪಿ ಸಿ.ಟಿ ಜಯಕುಮಾರ್ ರವರ ಮಾರ್ಗದರ್ಶನದಲ್ಲಿ, ವಿರಾಜಪೇಟೆ ವೃತ್ತ ಸಿ.ಪಿ.ಐ ಶ್ರೀಧರ್ ರವರ ನೇತೃತ್ವದಲ್ಲಿ ಪಿಎಸ್ಐ ಸಿದ್ದಲಿಂಗ ಬಿ. ಬಾನಸೆ, ಎಎಸ್ಐ ಶ್ರೀಧರ್, ಸಿಬ್ಬಂದಿಯವರಾದ ತೀರ್ಥಕುಮಾರ್, ನೆಹರು, ರಾಮಪ್ಪ, ಪ್ರದೀಪ, ಗಿರೀಶ್, ಮುಸ್ತಫ, ಸಂದೀಪ್ ರವರು ಪತ್ತೆ ಮಾಡಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,