ದಿನಾಂಕ: 15-02-2021 ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂರಿನ ಆಧಾರದ ಮೇಲೆ ಕೊಡಗು ಜಿಲ್ಲೆಯ ಮಕ್ಕಳ ವಿಶೇಷ ಪೊಲೀಸ್ ಘಟಕ, ಕಾರ್ಮಿಕ ಇಲಾಖೆ, ಮಕ್ಕಳ ರಕ್ಷಣಾ ಘಟಕದ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪದಲ್ಲಿ ವಿವಿಧ ವಾಣಿಜ್ಯ ಸಂಸ್ಥೆಗಳು ಹೋಟೆಲ್ ಗಳಲ್ಲಿ ಬಾಲಕಾರ್ಮಿಕ ತಪಾಸಣೆ ಹಮ್ಮಿಕೊಳ್ಳಲಾಯಿತು.
ಮುಗ್ದ ಮಕ್ಕಳನ್ನು ಶೋಷಣೆ ಮಾಡುವವರ ವಿರುದ್ದ ಸರ್ಕಾರ ವಿಶೇಷ ಕಾನೂನನ್ನು ರೂಪಿಸಿದೆ. ಎಲ್ಲಿಯೇಯಾಗಲಿ 18 ವರ್ಷ ವಯಸ್ಸಿನ ಒಳಗಿರುವ ಬಾಲಕ ಬಾಲಕಿಯರನ್ನು ಕೆಲಸಕ್ಕೆ ನೇಮಿಸಿಕೊಂಡು ಅವರಿಂದ ದುಡಿಸಿಕೊಳ್ಳುವವರ ವಿರುದ್ದ ಕಠಿಣವಾದ ಕಾನೂನು ಜಾರಿಯಲ್ಲಿದ್ದು, ಅಂತವರಿಗೆ ಅಧಿಕ ದಂಡ ಹಾಗೂ ಜೈಲು ಶಿಕ್ಷೆಯನ್ನು ವಿಧಿಸುವ ಕಾನೂನು ಇದೆ. ಅದ್ದರಿಂದ ಯಾರೂ ಸಹ ಬಾಲಕಾರ್ಮಿಕರ ನೇಮಕಕ್ಕೆ ಮುಂದಾಗಬಾರದು. ಸಾರ್ವಜನಿಕರು ಸಹ ಅಂಗಡಿ, ಹೋಟೆಲ್, ಖಾಸಗಿ ಕಂಪನಿಗಳು, ಗ್ಯಾರೇಜ್, ಕಟ್ಟಡ ನಿರ್ಮಾಣ ಇಂತಹ ಕಡೆ ಕಾರ್ಯನಿರ್ವಹಿಸುವ ಬಾಲಕಾರ್ಮಿಕರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭ ಹಿರಿಯ ಕಾರ್ಮಿಕ ನಿರಿಕ್ಷಕರಾದ ಶ್ರೀಮತಿ ಲೀನಾ, ಮಕ್ಕಳ ವಿಶೇಷ ಪೋಲಿಸ್ ಘಟಕದ ಶ್ರೀಮತಿ ಸುಮತಿ ಹಾಗೂ ಶ್ರೀ ಮಹೇಶ್, ಯೋಜನಾ ನಿರ್ದೇಶಕರಾದ ಶ್ರೀ ಆರ್ ಶೀರಾಜ್ ಅಹ್ಮದ್, ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ಕು.ಅನುಷಾ ಹಾಗೂ ರವಿ ಉಪಸ್ಥಿತರಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,