ಜಿಲ್ಲೆಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣ ಭೇದಿಸಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ ರವರ ವಿಶೇಷ ತಂಡ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ವಿಟ್ಲ, ಉಪ್ಪಿನಂಗಡಿ, ಪುತ್ತೂರು ಭಾಗದಲ್ಲಿ ಸರಣಿ ಕಳ್ಳತನಗಳು ಹೆಚ್ಚಿದ ಹಿನ್ನಲೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ರವರ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕರಾದ ಅವಿನಾಶ್ ಮತ್ತು ಕಲೈಮಾರ್, ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಪ್ರಸನ್ನ ಮತ್ತು ಸಂಜೀವ್, ವಿಟ್ಲ ಠಾಣಾ ಉಪನಿರೀಕ್ಷಕರಾದ ವಿನೋದ್ ರೆಡ್ಡಿ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕರಾದ ಈರಯ್ಯ , ಡಿಸಿಐಬಿ ಮತ್ತು ಠಾಣಾ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಆರೋಪಿಗಳಾದ 1. ಅರ್ಕುಳ ವಳಚ್ಚಿಳ್ ನಿವಾಸಿ ಅಮ್ಮೀ ಯಾನೆ ಅಮರುದ್ದಿನ್, 2.ಮಂಗಳೂರು ಕಣ್ಣೂರು ನಿವಾಸಿಗಳಾದ ಮಹಮದ್ ಯೂನಸ್ ಮತ್ತು 3.ಹಫೀಸ್ ಯಾನೆ ಅಪ್ಪಿ, 4.ಸಜಿಪಮೂಡ ಗ್ರಾಮದ ಪೆರ್ವಾ ನಿವಾಸಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಯಾನೆ ಕಳ್ಳ ಫಾರೂಕ್ (27) ಹಾಗೂ 5.ಮಂಗಳೂರು ಬೆಂಗ್ರೇ ನಿವಾಸಿ ಮಹಮ್ಮದ್ ಸಫ್ವಾನ್ ಯಾನೆ ಸರತ್ ಯಾನೆ ಕರೂ ಯಾನೆ ಸರೂ ಯಾನೆ ಸಫ್ವಾನ್ (19) ಎಂಬವರುಗಳನ್ನು ಎಂಬವರುಗಳನ್ನು ಬಂಧಿಸಿ, ಕೂಲಂಕುಷವಾಗಿ ವಿಚಾರಿಸಲಾಗಿ ಸದರಿ ಆರೋಪಿಗಳು
- ಬಂಟ್ವಾಳ ನಗರ ಪೊಲೀಸ್ ಠಾಣೆ ಆ. ಕ್ರ.6/2021 ಸುರಭಿ ಬಾರ್ ಕಳ್ಳತನ
- ಬಂಟ್ವಾಳ ನಗರ ಪೊಲೀಸ್ ಠಾಣೆ ಆ. ಕ್ರ 30/2020 ನರಿಕೊಂಬು ದೇವಸ್ಥಾನ ಹುಂಡಿ ಕಳವು
3.ಬಂಟ್ವಾಳ ನಗರ ಪೊಲೀಸ್ ಠಾಣೆ 36/2020 ಮೆಲ್ಕಾರ್ ಕಾಲೇಜ್ ಕಳ್ಳತನ - ವಿಟ್ಲ ಪೊಲೀಸ್ ಠಾಣೆ ಆ. ಕ್ರ 112/2021 ERSS ಪೆಟ್ರೋಲ್ ಬಂಕ್ ಕಳ್ಳತನ ಪ್ರಕರಣ
5.ಬಂಟ್ವಾಳ ನಗರ ಪೊಲೀಸ್ ಠಾಣೆ ಆ ಕ್ರ್ 47/2020 ಅಮ್ಟೂರು ಚರ್ಚ್ ಕಳ್ಳತನ
6.ಬಂಟ್ವಾಳ ನಗರ ಪೊಲೀಸ್ ಠಾಣೆ 5/2021 ಚಂಡಿಕಾ ಪರಮೇಶ್ವರಿ ದೇವಸ್ಥಾನ ಹುಂಡಿ ಕಳ್ಳತನ
7.ಬಂಟ್ವಾಳ ರೂರಲ್ ಪೊಲೀಸ್ ಠಾಣೆ ಆ ಕ್ರಾ 1/2020 ಸ್ಕೂಲ್ ಕಳ್ಳತನ
8.ಬಂಟ್ವಾಳ ರೂರಲ್ ಪೊಲೀಸ್ ಠಾಣೆ ಆ ಕ್ರಾ 26/20 ಶಂಭೂರು ಸ್ಕೂಲ್ ಕಳ್ಳತನ
9.ಬಂಟ್ವಾಳ ರೂರಲ್ ಪೊಲೀಸ್ ಠಾಣೆ ಆ ಕ್ರಾ 16/2021 ಪರ್ಲ ಚರ್ಚ್ ಕಳ್ಳತನ
10..ಬಂಟ್ವಾಳ ರೂರಲ್ ಪೊಲೀಸ್ ಠಾಣೆ ಆ ಕ್ರಾ 17/2021 ರಾಜೇಶ್ ಬಾರ್ ಕಳ್ಳತನ - ಮಂಗಳೂರು ರೂರಲ್ ಪೊಲೀಸ್ ಠಾಣೆ ಆ ಕ್ರಾ 5/2021 ಪಲ್ಸರ್ ಬೈಕ್ ಕಳ್ಳತನ
12.. ಉಪ್ಪಿನಂಗಡಿ ಪೊಲೀಸ್ ಠಾಣೆ ಆ ಕ್ರಾ 119/2020 ಉಲ್ಲಾಸ್ ಬಾರ್ ಕಳ್ಳತನ - ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿ ಅಲ್ಲಿ ಪಲ್ಸರ್ ಬೈಕ್ ಕಳ್ಳತನ ಸೇರಿ ಒಟ್ಟು 13 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿರುತ್ತದೆ. ಸದರಿ ಆರೋಪಿಗಳಿಂದ 3 ಬೈಕ್ ,ಒಂದು ಮೊಬೈಲ್, 6 DVR set box , 14 ಜೀವಂತ ಗುಂಡು, 2 ಮಾನಿಟರ್, ಬ್ರಾಡ್ ಬ್ಯಾಂಡ್ ಒ ಎಲ್ ಟಿ ಬಾಕ್ಸ್ ಪತ್ತೆ ಹಚ್ಚುವ ಮತ್ತು ರೂ 40,000 ಸಾವಿರ ಹಣ ಸೇರಿದಂತೆ ಒಟ್ಟು ಅಂದಾಜು ರೂ 4,80,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,