ದಿನಾಂಕ 29-08-2023 ರಂದು ಬೆಳಿಗ್ಗೆ 8:00 ಗಂಟೆಗೆ ಡಾ. ಅಲೋಕ್ ಮೋಹನ್, ಡಿಜಿ ಮತ್ತು
ಐಜಿಪಿ ಕರ್ನಾಟಕ ರಾಜ್ಯ, ಬೆಂಗಳೂರು ರವರಿಗೆ ಸೇವಾ ಕವಾಯಿತು ಏರ್ಪಡಿಸಲಾಗಿತ್ತು. ಈ ಸೇವಾ
ಕವಾಯಿತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಾ, ಪೊಲೀಸ್ ಇಲಾಖೆಗೆ UNITY, TEAM
SPRIT ಮತ್ತು DISCIPLINE ಮೂಲ ಬುನಾದಿಯಾಗಿದೆ ಮತ್ತು ಸೇವಾ ಪರೇಡ್‌ನಲ್ಲಿ ಪೊಲೀಸ್
ಕಾನ್ಸ್ಟೇಬಲ್‌ನಿಂದ ರಾಜ್ಯದ ಡಿ.ಜಿ.ಪಿ. ವರೆಗೆ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು
ಒಂದೇ ಸ್ಥಳದಲ್ಲಿ ಸೇರಿರುವ ಈ ಸಂದರ್ಭವು UNITY, TEAM
SPRIT ಮತ್ತು DISCIPLINE ಮುಖ್ಯವಾಗಿ ತೋರುತ್ತದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೆಲವು ಮುಖ್ಯ ಗುರಿಗಳನ್ನು ನಾನು ಈ
ಸಂದರ್ಭದಲ್ಲಿ ಹೇಳ ಬಯಸುತ್ತೇನೆ :
1. ನಾವು ಯಾವುದೇ PERSONAL ಅಥವಾ PROFESSIONAL ಕೆಲಸ ನಿರ್ವಹಿಸಲು
ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗಿರುವುದು ಅವಶ್ಯಕವಾಗಿದೆ. ಆದ್ದರಿಂದ ಎಲ್ಲಾ
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಮಾನಸಿಕ ಮತ್ತು ದೈಹಿಕ
ಆರೋಗ್ಯದ ಕಡೆ ಗಮನ ಮತ್ತು ಕಾಳಜಿ ವಹಿಸಬೇಕೆಂದು ನಾನು ಬಯಸುತ್ತೇನೆ.
2. ಕಾನೂನು ಸುವ್ಯವಸ್ಥೆ ನಿರ್ವಹಣೆ ಮತ್ತು ಅಪರಾಧ ನಿಯಂತ್ರಣವು ನಮ್ಮ ಇಲಾಖೆಯ
ಮುಖ್ಯ ಕರ್ತವ್ಯ. ಆದ್ದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ
ನಿಯಂತ್ರಣದ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಬಯಸುತ್ತೇನೆ.
3. ಅದೇ ರೀತಿ, ಮಾದಕ ದ್ರವ್ಯ, ರೌಡಿಸಂ ಮತ್ತು ಇತರೆ ಎಲ್ಲಾ ಕಾನೂನು ಬಾಹಿರ
ಚಟುವಟಿಕೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಇಲಾಖೆಯಲ್ಲಿ ಪ್ರತಿಯೊಬ್ಬರೂ
ಇದಕ್ಕೆ ಬದ್ಧರಾಗಿರಬೇಕು.
4. ಜನರ ಸೇವೆಗಾಗಿ ಪೊಲೀಸ್ ಇಲಾಖೆ ಇರುವುದು. ಜನರಿಗೆ ಸಹಾಯ ಮಾಡುವುದೇ
ಪೊಲೀಸರ ಮುಖ್ಯ ಗುರಿ. ಇದನ್ನು ನಾವು ಮರೆಯಬಾರದು. ನಾವೆಲ್ಲರೂ ಸಮಯ ಪ್ರಜ್ಞೆ
ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು.
5. ಅಲ್ಲದೇ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಅಶಿಸ್ತಿಗೆ ಅವಕಾಶ ಇರುವುದಿಲ್ಲ.
ಅಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ತೀವ್ರ ಕಟ್ಟುನಿಟ್ಟಿನ ಶಿಸ್ತು ಕ್ರಮ
ವಹಿಸಲಾಗುವುದು. ದೇಶದಲ್ಲಿಯೇ ಕರ್ನಾಟಕ ರಾಜ್ಯ ಪೊಲೀಸ್ ಒಂದು ಉತ್ತಮ
ಪೊಲೀಸ್ ಪಡೆಯಾಗಿದ್ದು, ಅದನ್ನು ಅತೀ ಉತ್ತಮ ಮಾಡುವುದು ನಮ್ಮೆಲ್ಲರ ಗುರಿ
ಎಂದು ಎಲ್ಲರಿಗೂ ಶುಭಾಶಯಗಳನ್ನು ಡಾ.ಅಲೋಕ್ ಮೋಹನ್ ರವರು ಕೋರಿದರು.
ಈ ಸಂದರ್ಭದಲ್ಲಿ ಡಿಜಿಪಿ ಗಳಾದ ಡಾ.ಪಿ.ರವೀಂದ್ರನಾಥ್, ಶ್ರೀ ಕಮಲ್ ಪಂತ್, ಶ್ರೀ
ಪ್ರತಾಪ್ ರೆಡ್ಡಿ ಮತ್ತು ಡಾ. ಎಂ.ಎ.ಸಲೀO ಹಾಗೂ ಹಿರಿಯ ಕಿರಿಯ ಪೊಲೀಸ್ ಅಧಿಕಾರಿಗಳು
ಉಪಸ್ಥಿತರಿದ್ದರು