ಸಿಸಿಟಿವಿ ಅಳವಡಿಸಿ ಸುರಕ್ಷಿತವಾಗಿರಿ\” ಅಭಿಯಾನದ ಭಾಗವಾಗಿ ಗದಗ ಶಹರದ ನಾಗರಿಕರ ಸುರಕ್ಷತೆ ಬಗ್ಗೆ ಗದಗ ಜಿಲ್ಲಾ ಪೊಲೀಸ್ ಕೈಕೊಳ್ಳುತ್ತಿರುವ ವಿಶೇಷ ಕ್ರಮಗಳು

ಸಿಸಿಟಿವಿ ಅಳವಡಿಸಿ ಸುರಕ್ಷಿತವಾಗಿರಿ\” ಅಭಿಯಾನದ ಭಾಗವಾಗಿ ಇಂದು ದಿನಾಂಕ: 19.07.2023 ರಂದು ಗದಗ ಶಹರದ ತೋಂಟದಾರ ಕಲ್ಯಾಣ ಕೇಂದ್ರದಲ್ಲಿ ಗದಗ ಜಿಲ್ಲಾ ಪೊಲೀಸ್‌ ವತಿಯಿಂದ ಶಹರ ವ್ಯಾಪ್ತಿಯ ಚೀವ್ ಮೀಟಿಂಗ್ ನಡೆಸಲಾಯಿತು. ಗದಗ ಶಹರದ ವ್ಯಾಪ್ತಿಯಲ್ಲಿ ಸಾರ್ವಜನಿಕರು, ವ್ಯಾಪಾರಸ್ಥರು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗದಗ ಜಿಲ್ಲಾ ಪೊಲೀಸ್ ವತಿಯಿಂದ ಗರಿಷ್ಠ ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ & ಜೀವರಕ್ಷಣಿ ಕುರಿತು ಕೈಕೊಳ್ಳಬೇಕಾದ ಈ ಕೆಳಗಿನ ಕ್ರಮಗಳ ಕುರಿತು ಸಭೆಯಲ್ಲಿ ಸಹಕಾರ ಕೋರಲಾಯಿತು. ಈ ಸಂದರ್ಭದಲ್ಲಿ ಶಹರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳ ಪದಾಧಿಕಾರಿಗಳು & ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

\"\"


ಶಹರದ ಪ್ರತಿ ಅಂಗಡಿ / ವ್ಯಾಪಾರ ಮಳಿಗೆ / ಮನೆಗಳು / ಲಾಡ್ಜ್ & ಹೋಟೆಲ್‌ಗಳ ಹೊರಗಡೆ & ಒಳಗಡೆ ಸಂಪೂರ್ಣ ಕವರೇಜ್ ಇರುವ ರೀತಿಯಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ವ್ಯಾಪಾರಸ್ಥರು & ಅವರ ಸಂಘಟನೆಗಳಗೆ ಸ್ಪಷ್ಟಪಡಿಸಲಾಯಿತು.

  • ಕನಿಷ್ಠ ಒಂದು ತಿಂಗಳು ಸಿಸಿಟಿವಿ ವಿಡಿಯೋ ಬ್ಯಾಕ್‌ಅಪ್ ಸಂಗ್ರಹವಿರುವ ಸಾಮರ್ಥ್ಯದ ಸಾಧನಗಳು & ನೈಟ್ ವಿಜನ್ ಸೌಲಭ್ಯವಿರುವ ಸಿಸಿಟಿವಿಗಳನ್ನು ಅಳವಡಿಸಿಕೊಳ್ಳಬೇಕು.
  • ಅಪರಾಧಗಳನ್ನು ತಡೆಗಟ್ಟಲು, ಪತ್ತೆ ಹಚ್ಚಲು & ಕಾನೂನಿನ ಮೂಲಕ ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲ ಸಿಸಿಟಿವಿ ಅಳವಡಿಕೆ ಅತ್ಯಂತ ಸುಲಭವಾದ & ಸೂಕ್ತ ವಿಧಾನವಾಗಿದ್ದು, ಈ ಬಗ್ಗೆ ತಿಳುವಳಿಕೆ ಮೂಲಕ ಶಹರದ ಎಲ್ಲಾ ಸಂಘಟನೆಗಳಗೆ ಮನವರಿಕೆ ಮಾಡಿಕೊಡಲಾಯಿತು.
    ವಿಶೇಷ ಸಭೆಯು ಶ್ರೀ. ಬಿ.ಎಸ್.ನೇಮಗೌಡ ಐಪಿಎಸ್, ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ, ಗದಗ ರವರ ನೇತೃತ್ವದಲ್ಲಿ ಜರುಗಿದ್ದು ಇರುತ್ತದೆ.

Leave a Reply

Your email address will not be published. Required fields are marked *