ಜೆ.ಸಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಏಲಿಯಮ್ಸ್ ಟೌನ್‌ನ ದಿನಾಂಕ 02-08-2023 ರಂದು ಮಧ್ಯಾಹ್ನ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಹೆಲೈಟ್ ಧಾರಿಗಳು ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಸಿರಾದಿಯನ್ನು ಅಡ್ಡಗಟ್ಟಿ ಡಾಕ್ಟರ್‌ನಿಂದ ಹೆದರಿಸಿ, ಮೊಬೈಲ್ ಫೋನ್ ಅನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಒಂದು ವಿಶೇಷ ತಂಡ ರಚಿಸಿ, ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರು ನೀಡಿದ ಮಾಹಿತಿ ಮೇರೆಗೆ ಸುಮಾರು 3,25 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 14 ಮೊಬೈಲ್ ಫೋನ್‌ಗಳು ಮತ್ತು ಕಳವು ಮಾಡಿ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಗಳ ಬಂಧನದಿಂದ ಸದರಿ ಆರೋಪಿಗಳು ಹಳೆ ಎಂ.ಓ. ಆಸಾಮಿಗಳಾಗಿರುವುದಾಗಿ ತಿಳಿದುಬಂದಿದ್ದು, ಇಬ್ಬರು ಆರೋಪಿಗಳ ವಿರುದ್ಧ ಈ ಹಿಂದೆ ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್, ಡಿ.ಜೆ.ಹಳ್ಳಿ, ಕೆ.ಆರ್.ಪುರಂ, ಹೆಣ್ಣೂರು, ವಿದ್ವಾರಮಠ, ಪೀಣ್ಯ, ಯಲಹಂಕ, ಸಂಪಿಗೆಹಳ್ಳಿ, ಯಲಹಂಕ ನ್ಯೂಟೌನ್, ನೆಲಮಂಗಲ, ಚಿಂತಾಮಣಿ ಟೌನ್, ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ಡಕಾಯಿತಿ, ಕೊಲೆ ಪ್ರಯತ್ನ, ಹಲ್ಲೆ, ದ್ವಿಚಕ್ರವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಬೆಂಗಳೂರು ನಗರದ ಜೆ.ಸಿ.ನಗರದ ಒಂದು ಸುಲಿಗೆ ಪ್ರಕರಣ ಹಾಗೂ ಅಮೃತಹಳ್ಳಿ ಪೊಲೀಸ್
ಠಾಣೆಯ ಒಂದು ದ್ವಿಚಕ್ರವಾಹನ ಪ್ರಕರಣ ಸೇರಿದಂತೆ ಒಟ್ಟು 2 ಪ್ರಕರಣಗಳು ಪತ್ತೆಯಾಗಿರುತ್ತವೆ.
ಬೆಂಗಳೂರು ನಗರ ಉತ್ತರ ವಿಭಾಗದ ಶ್ರೀ ಶಿವ ಪ್ರಕಾಶ್ ದೇವರಾಜು, ಉಪ ಪೊಲೀಸ್
ಆಯುಕ್ತರವರ ಮಾರ್ಗದರ್ಶನದಲ್ಲಿ ಶ್ರೀ ಮನೋಜ್, ಕುಮಾರ್, ಎಂ.ಈ. ಎಸಿಪಿ, ಜೆ.ಸಿ.ನಗರ ಉಪ ವಿಭಾಗ ಮತ್ತು ಶ್ರೀ ಪಾಪಣ್ಣ ಎಂ. ಪೊಲೀಸ್ ಇನ್ಸ್‌ಪೆಕ್ಟರ್, ಜೆ.ಸಿ.ನಗರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಯವರ ತಂಡ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.