ದಾವಣಗೆರೆ: ದಿನಾಂಕ: 07/07/2023 ರಂದು ಬಸವಾಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಕಬ್ಬಳ ಗ್ರಾಮದಲ್ಲಿ ಮನೆಯ ಪಕ್ಕದಲ್ಲಿನ ಖಾಲಿ ನಿವೇಶನದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುತ್ತಾರೆ ಅಂತಾ ಮಾಹಿತಿಯ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಆರ್.ಬಿ ಬಸರಗಿ ರವರು ಮತ್ತು ಡಾ. ಸಂತೋಷ ಪೊಲೀಸ್ ಉಪಾಧೀಕ್ಷಕರು ಚನ್ನಗಿರಿ ಉಪ ವಿಭಾಗ ಚನ್ನಗಿರಿ ಮತ್ತು ಶ್ರೀ ಮಹೇಶ್ ಪೊಲೀಸ್ ವೃತ್ತ ನಿರೀಕ್ಷಕರು ಸಂತೇಬೆನ್ನೂರು ವೃತ್ತ ರವರ ಮಾರ್ಗದರ್ಶನದಲ್ಲಿ ಕು|| ವೀಣಾ ಹೆಚ್.ಕೆ. ಪಿ.ಎಸ್.ಐ ಬಸವಾಪಟ್ಟಣ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಶ್ರೀ ಅಣೇಶ್, ಶ್ರೀ ಪ್ರಕಾಶ್, ಶ್ರೀ ಇಬ್ರಾಹಿಂ, ಶ್ರೀ ರವೀಂದ್ರ ವೈ.ಹೆಚ್, ಶ್ರೀ ಅಂಜನೇಯ ಹಾಗೂ ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ತೆರಳಿ ಗಾಂಜಾ ಗಿಡಗಳನ್ನು ಬೆಳೆದಿದ್ದ 1) ಚಂದ್ರನಾಯ್ಕ, 58 ವರ್ಷ. ವ್ಯವಸಾಯ ವೃತ್ತಿ, ವಾಸ:ಕಬ್ಬಳ ಗ್ರಾಮ ಚನ್ನಗಿರಿ ತಾಲ್ಲೂಕ್ ಈತನನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಬೆಳೆದಿದ್ದ ಒಟ್ಟು 3 ಕೆ.ಜಿ. ತೂಕದ 10 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದು, ಇದರ ಅಂದಾಜು ಬೆಲೆ ಸುಮಾರು 20.000/ ರೂ ಆಗಬಹದು. ಈ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮಾನ್ಯ ಪೊಲೀಸ್ ಅಧೀಕ್ಷಕರವರಾದ ಡಾ.ಅರುಣ್ ಕೆ., ಐ.ಪಿ.ಎಸ್ ರವರು ಪ್ರಶಂಸನೆ ವ್ಯಕ್ತ ಪಡಿಸಿರುತ್ತಾರೆ.