ದಿನಾಂಕ-15/3/2023ರಂದು ಬಾಣಸವಾಡಿ ಪೊಲೀಸರು ತಮ್ಮ ಠಾಣೆಯ ಸುಲಿಗೆ ಪ್ರಕರಣದಲ್ಲಿ ಆರೋಪಿಯಾದ ವಿನಯ್ ಎನ್ ಬಿನ್ ನಾಗರಾಜು 23 ವರ್ಷ ಮನೆ ನಂ- 242, ರೆಡ್ಡಿ ಪಾಳ್ಯ, ಹೆಚ್.ಎ.ಎಲ್ ಅಂಚೆ, ಬೆಂಗಳೂರು ನಗರ-17 ಎಂಬುವವನನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಆರೋಪಿಯು ದಿನಾಂಕ 09.06.2023 ರಂದು ಮಧ್ಯರಾತ್ರಿ 12 ಗಂಟೆಯಲ್ಲಿ ಓಲಾ ಕ್ಯಾಬನ್ನು ವೈಟ್ ಪೀಲ್ಡ್ ನಿಂದ 4 ಗಂಟೆಗಳ ರೆಂಟಿಗೆ ಬುಕ್ ಮಾಡಿ, ಅಲ್ಲಿಂದ ಹೊರಟು ಬಾಣಸವಾಡಿ ಠಾಣಾ ಸರಹದ್ದಿನ ಜೈಭಾರತ್ ನಗರದಲ್ಲಿ ತನ್ನ ರೈಡನ್ನು ನಿಲ್ಲಿಸಲು ಸೂಚಿಸಿ, ಕಾರು ಚಾಲಕನಿಗೆ ಚಾಕನ್ನು ತೋರಿಸಿ ಹೆದರಿಸಿ ಚಾಲಕನಿಂದ 1500/- ರೂ ನಗದು ಹಾಗು ಎ.ಟಿ.ಎಂ ಗಳನ್ನು ಸುಲಿಗೆ ಮಾಡಿರುತ್ತಾನೆ. ಆತನ ವಶದಿಂದ 101,700/- ರೂ ನಗದು, ಒಂದು ವಿವೋ ಸ್ಮಾಟ ಫೋನ್ & ಒಂದು ಚಾಕುವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಶ್ರೀ. ಬಿ. ದಯಾನ೦ದ ಪೊಲೀಸ್ ಆಯುಕ್ತರು ಹಾಗೂ ಪೂರ್ವ ವಿಭಾಗದ ಉಪ ಪೊಲೀಸ್ ಕಮೀಷನರ್ ಡಾ|| ಭೀಮಾಶಂಕರ ಗುಳೇದ ರವರ ಮಾರ್ಗದರ್ಶನದಲ್ಲಿ ಬಾಣಸವಾಡಿ, ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್, ಶ್ರೀ.ಉಮಾಶಂಕರ್ ರವರ ನೇತೃತ್ವದಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಸ೦ತೋಷಕುಮಾರ.ಎಲ್, ರವರ ಉಸ್ತುವಾರಿಯಲ್ಲಿ ಪಿ ಎಸ್ ಐ ರವರಾದ ಶ್ರೀ. ಹನುಮಂತರೆಡ್ಡಿ ರವರು ತನಿಖೆ ಕೈಗೊಂಡು ಸಿಬ್ಬಂದಿಗಳಾದ ಹೆಚ್.ಸಿ.-9472 ಶ್ರೀ ರೇಣುಕಾ ನಾಯ್ಕ ಪಿ.ಸಿ-13285 ಶ್ರೀ ಅತಿಫ್ ಹುಸೇನ್ ಪಿ.ಸಿ-19222 ಶ್ರೀ ರಾಮಕೃಷ್ಣ ರವರುಗಳ ಮೂಲಕ ಪ್ರಕರಣದಲ್ಲಿ ಸುಲಿಗೆ ಮಾಡಿದ್ದ ಮತ್ತು ಸುಲಿಗೆಗೆ ಬಳಸಿದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಹಿರಿಯ ಅಧಿಕಾರಿಗಳು ಪ್ರಶ೦ಸೆಯನ್ನು ವ್ಯಕ್ತಪಡಿಸಿರುತ್ತಾರೆ.