ಬೆಂಗಳೂರಿನ ಹೆಣ್ಣೂರು ಪೊಲೀಸರ ಕಾರ್ಯಾಚರಣೆ ಚಿನ್ನಾಭರಣ ಕಳುವ ಮಾಡಿದ ತಮಿಳುನಾಡು ಮೂಲದ ಮೂರು ಜನ ಕುಖ್ಯಾತ ಕಳ್ಳರ ಬಂಧನ ಆರೋಪಿಗಳಿಂದ 49 ಲಕ್ಷ ರೂ ಮೌಲ್ಯದ ಚಿನ್ನಾಭರಣ ವನ್ನು ವಶಪಡಿಸಿಕೊಂಡ ಪೊಲೀಸರು
ಬೆಂಗಳೂರು ನಗರದ ಹೆಣ್ಣೂರು, ರಾಮಮೂರ್ತಿನಗರ, ಕೊತ್ತನೂರು, ಮತ್ತು ಯಲಹಂಕ ಹಾಗೂ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆ ಪಿಳಮೇಡು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಮತ್ತು ಹಗಲು ವೇಳೆಯಲ್ಲಿ ಮನೆಗಳನ್ನು ಲೂಟಿ ಮಾಡಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದರು.
ಆರೋಪಿಗಳಾದ ಗುಣಶೇಖರ್, ಅಜಿತ್, ಮುತ್ತು ಕುಮಾರ್, ಇವರುಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದು ಆರೋಪಿಗಳು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಂಟು ಪ್ರಕರಣ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಯಲಹಂಕ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ತಮಿಳುನಾಡು ರಾಜ್ಯದ ಕೊಯಂಬತ್ತೂರು ಜಿಲ್ಲೆಯ ಪಿಲಮೆಡು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಒಟ್ಟು ಹದಿನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು ಆರೋಪಗಳಿಂದ ಸುಮಾರು 1092.8 ಗ್ರಾಂ 49 ಲಕ್ಷ ಮೌಲ್ಯದ ಒಡವೆಗಳನ್ನು ವಶಪಡಿಸಿಕೊಂಡಿರುತ್ತಾರೆ.
ಪೂರ್ವ ವಿಭಾಗದ ಉಪಪ ಪೊಲೀಸ್ ಆಯುಕ್ತರದ ಡಾ ಭೀಮಾಶಂಕರ್ ಎಸ್ ಗುಳೇದರವರ ಮಾರ್ಗದರ್ಶನದಲ್ಲಿ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾದ ನಿಂಗಪ್ಪ ಬಿ ಸಕ್ರಿ ರವರ ನೇತೃತ್ವದಲ್ಲಿ ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ ಮಂಜುನಾಥ ಮತ್ತು ಪ್ರತಾಪ್ ಆರ್, ಪಿ ಎಸ್ ಐ ನಿಂಗರಾಜ್ ಪಿಎಸ್ಐ ರಮೇಶ್ ಪಿಎಸ್ಐ ರಂಜಿತ್ ಹಾಗೂ ಸಿಬ್ಬಂದಿಯವರಾದ ಅಬ್ದುಲ್ ಹಮೀದ್, ವಿಟ್ಟಲ್, ಕಳಕಪ್ಪ ಗಣೇಶ್, ಲಕ್ಷ್ಮಣ ರಾಥೋಡ್, ಶಿವಕುಮಾರ್, ಹೇ ಜಾಸ್, ದೇವರಾಜಪ್ಪ, ಮಹೇಶ್ ಇಂಗಳಗಿ, ಶಿವಾನಂದ ಬಿರಾದರ, ಆನಂದ, ಶಿವರಾಜ್ ಬಡಿಗೇರ, ಸೀತಾ ರಾಮು, ಶ್ರೀನಾಥ ರೆಡ್ಡಿ, ಸಿದ್ದಲಿಂಗೇಶ, ನಾಗರಾಜ್, ಸಿಬ್ಬಂದಿಯವರು ಕಾರ್ಯದಿಂದ ಆರೋಪಿಗಳನ್ನು ಬಂಧಿಸಿರುತ್ತಾರೆ.
ಪೂರ್ವ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ಪೋಲಿಸ್ ಆಯುಕ್ತರು ಬೆಂಗಳೂರು ನಗರ ಹಾಗೂ ಅಪಾರ ಪೊಲೀಸ್ ಆಯುಕ್ತರು (ಪೂರ್ವ) ರವರು ಪ್ರಶಂಸಿಸಿರುತ್ತಾರೆ.